HEALTH TIPS

ಸೆ.27ರಿಂದ ಸುಪ್ರೀಂ ಕೋರ್ಟ್ ಕಲಾಪ ನೇರ ಪ್ರಸಾರ

               ಉದ್ದೇಶದಿಂದ ಐದು ನ್ಯಾಯಾಧೀಶರ ಸಂವಿಧಾನ ಪೀಠಗಳಲ್ಲಿ ವಿಚಾರಣೆ ನಡೆಸುತ್ತಿರುವ ಪ್ರಕರಣಗಳನ್ನು ಸೆ. 27 ರಿಂದ ನೇರ ಪ್ರಸಾರ ಮಾಡಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

                    ಆದ್ಯತೆ ಮೇರೆಗೆ ಸಾಂವಿಧಾನಿಕ ಪೀಠದ ಪ್ರಕರಣಗಳ ವಿಚಾರಣೆ ನೇರ ಪ್ರಸಾರ ಪ್ರಾರಂಭಿಸಲು ಮಂಗಳವಾರ ನಡೆದ ಪೂರ್ಣ ನ್ಯಾಯಾಲಯದ ಸಭೆ ನಿರ್ಧರಿಸಿದೆ.

ಸಭೆ ನಿರ್ಧಾರ ಸರ್ವಾನುಮತದಿಂದ ಕೂಡಿದ್ದು, ವಿಚಾರಣೆಗಳನ್ನು ಆರಂಭದಲ್ಲಿ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

                  ಆ. 27 ರಂದು ಯು.ಯು.ಲಲಿತ್‌ ಅವರು ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಾಕಿ ಇರುವ ಪ್ರಕರಣಗಳ ವಿಚಾರಣೆಗಾಗಿ ಐದು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚನೆ ಮಾಡಿದ್ದಾರೆ.

                ಪ್ರಸ್ತುತ ಸಾಂವಿಧಾನಿಕ ಪೀಠದ ಎದುರು ಭೋಪಾಲ್ ಅನಿಲ ದುರಂತ ಪ್ರಕರಣ, ಇಡಬ್ಯ್ಲೂಎಸ್‌ ಕೋಟಾದ ಮಾನ್ಯತೆ, ಸೇವೆಗಳ ಮೇಲಿನ ನಿಯಂತ್ರಣ ವಿಚಾರಣೆ ನಡೆಯುತ್ತಿದೆ.

                 ಇಡಬ್ಲ್ಯೂಎಸ್‌ ಕೋಟಾ, ಹಿಜಾಬ್ ನಿಷೇಧ, ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ರಾಷ್ಟ್ರೀಯ ಪ್ರಾಮುಖ್ಯತೆಯ ಹಲವಾರು ವಿಷಯಗಳ ವಿಚಾರಣೆಯ ನೇರ ಪ್ರಸಾರವನ್ನು ತಕ್ಷಣವೇ ಪ್ರಾರಂಭಿಸುವಂತೆ ಇತ್ತೀಚೆಗೆ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು ಮುಖ್ಯನ್ಯಾಯಮೂರ್ತಿ ಮತ್ತು ಇತರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದರು.

               ಗುಜರಾತ್‌, ಒಡಿಶಾ, ಮಧ್ಯಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಹಲವು ಹೈಕೋರ್ಟ್‌ಗಳು ಈಗಾಗಲೇ ಯೂಟ್ಯೂಬ್‌ನಲ್ಲಿ ಕಲಾಪಗಳ ನೇರ ಪ್ರಸಾರ ಆರಂಭಿಸಿವೆ. ಸಿಜೆಐ ಎನ್. ವಿ. ರಮಣ ಅವರ ಕೊನೆ ದಿನದ ಔಪಚಾರಿಕ ಪೀಠದ ಕಲಾಪಗಳನ್ನು ನೇರ ಪ್ರಸಾರ ಮಾಡಲಾಗಿತ್ತು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries