ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಈ ಪ್ರತಿಮೆಯು ಕೇಂದ್ರ ಸರ್ಕಾರದ 13,450-ಕೋಟಿ ರೂಪಾಯಿ ಮೌಲ್ಯದ ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿದೆ. ಇದು ಹೊಸ ಸಂಸತ್ತಿನ ಕಟ್ಟಡ, ಹೊಸ ಕಚೇರಿ ಮತ್ತು ಪ್ರಧಾನಿ ಹಾಗೂ ಉಪ ರಾಷ್ಟ್ರಪತಿಗಳ ನಿವಾಸ, ಹೊಸ ಸಚಿವಾಲಯದ ಕಟ್ಟಡಗಳನ್ನು ಹೊಂದಿರುತ್ತದೆ.ನೇತಾಜಿ ಅವರ ಪ್ರತಿಮೆಯನ್ನು 280 ಮೆಟ್ರಿಕ್ ಟನ್ ತೂಕದ ಬೃಹತ್ ಗ್ರಾನೈಟ್ ಏಕಶಿಲೆಯ ಮೇಲೆ ಕೆತ್ತಲಾಗಿದೆ.
ಬಳಿಕ ಪ್ರಧಾನಿ ಮೋದಿ ಅವರು ದೆಹಲಿಯ ಹೃದಯಭಾಗದಲ್ಲಿರುವ ಇಂಡಿಯಾ ಗೇಟ್ ಬಳಿಯ ಕರ್ತವ್ಯ ಪಥ್ ಮಾರ್ಗವನ್ನು ಉದ್ಘಾಟಿಸಿದರು. ಕೇಂದ್ರ ಸರ್ಕಾರ ರಾಜ್ ಪಥ್ ಮತ್ತು ಸೆಂಟ್ರಲ್ ವಿಸ್ತಾ ಲಾನ್ಸ್ ಅನ್ನು ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಿದೆ.
ಕೇಂದ್ರ ಸರ್ಕಾರ ರಾಜ್ ಪಥ್ ಮಾರ್ಗವನ್ನು ಸೆಂಟ್ರಲ್ ವಿಸ್ತಾ ಲಾನ್ಸ್ ಯೋಜನೆ ಅಡಿ ಅಭಿವೃದ್ಧಿಗೊಳಿಸಿ ಅದಕ್ಕೆ ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಿದೆ.