ಪೆರ್ಲ: ಗಡಿನಾಡು ಕಾಸರಗೋಡು ಸಹಿತ ದೇಶದಾತ್ಯಂತ ವಿವಿಧೆಡೆ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ “ಸವಿಹೃದಯದ ಕವಿಮಿತ್ರರು” ವೇದಿಕೆ ಪೆರ್ಲ ಇದರ ನೇತೃತ್ವದಲ್ಲಿ ಅ.2 ರಂದು ಪೆರ್ಲ ವ್ಯಾಪಾರಿ ಭವನದಲ್ಲಿ ಅಪರಾಹ್ನ 2 ರಿಂದ ದಸರಾ ನಾಡಹಬ್ಬ-ಸಾಹಿತ್ಯಗೋಷ್ಠಿ ಏರ್ಪಡಿಸಿದೆ.
ಸಮಾರಂಭದಲ್ಲಿ ಸಾಹಿತಿ ಉದಯ ಭಾಸ್ಕರ್ ಸುಳ್ಯ ಅಧ್ಯಕ್ಷತೆ ವಹಿಸುವರು. ಹಿರಿಯ ವೈದ್ಯ ಡಾ.ಕೇಶವ ನಾಯ್ಕ್. ಖಂಡಿಗೆ ಉದ್ಘಾಟಿಸುವರು. ಈ ಸಂದರ್ಭ ನವರಾತ್ರಿ ಮತ್ತು ಸಾಹಿತ್ಯ ವಿಷಯದಲ್ಲಿ ಸಾಹಿತಿ ಪ್ರೇಮ ಉದಯಕುಮಾರ್.ಮುಲ್ಕಿ ಉಪನ್ಯಾಸ ನೀಡುವರು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಸಾಹಿತಿ-ವ್ಯಂಗ್ಯಚಿತ್ರಗಾರ ವೆಂಕಟ್ ಭಟ್ ಎಡನೀರು, ಹಿರಿಯ ಸಾಹಿತಿ ಹರೀಶ್ ಪೆರ್ಲ, ಸಾಹಿತಿ, ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಉಪಸ್ಥಿತರಿದ್ದು ಶುಭಹಾರೈಸುವರು. ಈ ಸಂದರ್ಭ ಯುವ ಕವಿಗಳಿಂದ ಕವಿ-ಕಥಾ ಗೋಷ್ಠಿ ನಡೆಯಲಿದೆ.
ಸವಿಹೃದಯದ ಕವಿಮಿತ್ರರಿಂದ ದಸರಾ ನಾಡಹಬ್ಬ-ಸಾಹಿತ್ಯಗೋಷ್ಠಿ 2 ರಂದು
0
ಸೆಪ್ಟೆಂಬರ್ 25, 2022