ಕಾಸರಗೋಡು: ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವದ ಅಂಗವಾಗಿ ಸಿರಿಗನ್ನಡ ವೇದಿಕೆ ಬೆಂಗಳೂರು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಪ್ರಾಯೋಜಕತ್ವದಲ್ಲಿ ಅ.2 ರಂದು ಅಪರಾಹ್ನ 2.30 ರಿಂದ ನಾಯ್ಕಾಪು ನಾರಾಯಣಮಂಗಲದ ವಿ.ಬಿ.ಕುಳಮರ್ವ ಅವರ ಶ್ರೀನಿಧಿ ಭಟ್ಸ್ ಕಂಪೌಂಡ್ ಸಾಹಿತ್ಯ ಮನೆಯಲ್ಲಿ ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಲಿದೆ.
ನಿವೃತ್ತ ಕನ್ನಡ ಅಧ್ಯಾಪಕ ಗುಣಾಜೆ ರಾಮಚಂದ್ರ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ನಿವೃತ್ತ ವಿದ್ಯಾಧಿಕಾರಿ ಲಲಿತಾ ಲಕ್ಷ್ಮೀ ಕುಳಮರ್ವ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡುವರು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಭಾಗವಹಿಸುವರು. ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ ಸ್ಥಾಪಕಾಧ್ಯಕ್ಷ ವಾಮನ ರಾವ್ ಬೇಕಲ್ ಶುಭಾಶಂಸನೆಗೈಯುವರು. ಕಾರ್ಯಕ್ರಮದಲ್ಲಿ ವಿ.ಬಿ.ಕುಳಮರ್ವ, ಪ್ರೊ.ಗಣಪತಿ ಭಟ್ ಕುಳಮರ್ವ, ಶ್ಯಾಮ ಪ್ರಸಾದ ಕುಳಮರ್ವ ಉಪಸ್ಥಿತರಿರುವರು.
ಕಾಸರಗೋಡು ದಸರಾ ಕವಿಗೋಷ್ಠಿ ಅ.2 ರಂದು ನಾರಾಯಣಮಂಗಲದಲ್ಲಿ
0
ಸೆಪ್ಟೆಂಬರ್ 29, 2022