ನವದೆಹಲಿ: ದೇಶದ ರಾಜಧಾನಿಯಲ್ಲಿ ಹೊಸದಾಗಿ 3 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, ನಗರದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 12ಕ್ಕೆ ಏರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಂಕಿಪಾಕ್ಸ್ ಸೋಂಕಿತ ಐವರು ರೋಗಿಗಳು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇತ್ತೀಚೆಗೆ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದ್ದ ನೈಜೀರಿಯಾದ ಮಹಿಳೆ ಒಂಬತ್ತನೆ ಸೋಂಕಿತೆಯಾಗಿದ್ದರು. ಇದೀಗ, ಹೊಸದಾಗಿ ಮೂವರಲ್ಲಿ ಸೋಂಕು ದೃಢಪಟ್ಟಿದೆ.
'ಈವರೆಗೆ ರಾಜಧಾನಿಯಲ್ಲಿ 12 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಐವರು ರೋಗಿಗಳು ಎನ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಯಾವುದೇ ಶಂಕಿತ ಪ್ರಕರಣ ಇಲ್ಲ' ಎಂದು ಮೂಲಗಳು ಹೇಳಿವೆ.
ಮಂಕಿಪಾಕ್ಸ್ ಜ್ವರ, ಚರ್ಮದ ಹುಣ್ಣು, ತಲೆನೋವು, ಸ್ನಾಯು ನೋವು, ನಿಶ್ಯಕ್ತಿ, ಶೀತ ಅಥವಾ ಬೆವರು, ಗಂಟಲು ನೋವು, ಮೂಗು ಸೋರುವಿಕೆ ಮತ್ತು ಕೆಮ್ಮು ಮುಂತಾದ ಸಾಮಾನ್ಯ ಲಕ್ಷಣಗಳನ್ನು ಹೊಂದಿರುವ ವೈರಲ್ ಝೂನೋಟಿಕ್ ಕಾಯಿಲೆಯಾಗಿದೆ.
ಭಾನುವಾರ, 30 ವರ್ಷದ ನೈಜೀರಿಯಾದ ಶಂಕಿತ ಮಂಕಿಪಾಕ್ಸ್ ರೋಗಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಅವರ ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದರು.