ನವದೆಹಲಿ: ಮೂಗಿನ ಮೂಲಕ ನೀಡಬಹುದಾದ ಕೋವಿಡ್ ಲಸಿಕೆಯನ್ನು 5 ರಿಂದ 18 ವರ್ಷ ವಯೋಮಾನದವರಿಗೆ ನೀಡುವುದಕ್ಕೆ ಸಂಬಂಧಿಸಿ ಮೂರನೇ ಹಂತದ ಅಧ್ಯಯನ ಕೈಗೊಳ್ಳಲು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅನುಮತಿ ಕೇಳಿದೆ.
'5 ರಿಂದ 18 ವರ್ಷ ವಯೋಮಾನದವರಿಗೆ ಮೂಗಿನ ಮೂಲಕ ನೀಡಬಹುದಾದ ಕೋವಿಡ್ ಲಸಿಕೆಯು (ಬಿಬಿವಿ154) ಎಷ್ಟರ ಮಟ್ಟಿಗೆ ಸುರಕ್ಷಿತ, ಅದರ ಪ್ರತಿಕ್ರಿಯಾತ್ಮಕತೆ ಏನು ಹಾಗೂ ಲಸಿಕೆಯಿಂದ ಸಿಗುವ ರೋಗನಿರೋಧಕ ಶಕ್ತಿ ಎಷ್ಟು ಎಂಬುದು ಸೇರಿದಂತೆ ವಿವಿಧ ವಿಷಯಗಳ ಮೌಲ್ಯಮಾಪನ ನಡೆಸಲು ಅನುಮತಿ ನೀಡಬೇಕು' ಎಂದು ಕಂಪನಿಯು ಭಾರತೀಯ ಔಷಧ ಮಹಾನಿಯಂತ್ರಕರಿಗೆ (ಡಿಸಿಜಿಐ) ಅರ್ಜಿ ಸಲ್ಲಿಸಿದೆ.