ತಿರುವನಂತಪುರ: ದೇಶವಿರೋಧಿ ಚಟುವಟಿಕೆಗಳನ್ನು ನಡೆಸಿ ಹಲವು ಅಮಾಯಕರ ಹತ್ಯೆಗೆ ಕಾರಣರಾದ ಪಾಪ್ಯುಲರ್ ಫ್ರಂಟ್ ಮತ್ತು ಅದರ ಅಂಗ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿμÉೀಧಿಸಿದೆ.
ಭಯೋತ್ಪಾದಕ ಸಂಘಟನೆಯ ಮೂಲ ಸಿದ್ಧಾಂತಗಳಿಗೆ ಎದುರಾಗುವವರನ್ನು ತೊಡೆದುಹಾಕುವುದು ಮತ್ತು ಭಾರತವನ್ನು ಇಸ್ಲಾಮಿಕ್ ದೇಶವಾಗಿ ಪರಿವರ್ತಿಸುವುದು ಅದರ ಲಕ್ಷ್ಯವಾಗಿತ್ತೆಂದು ತಿಳಿದುಬಂದಿದೆ.
ಇತರ ಭಯೋತ್ಪಾದಕ ಸಂಘಟನೆಗಳಿಂದ ನಿಧಿ ಸಂಗ್ರಹಿಸಿ, ಯುವಕರನ್ನು ಬ್ರೈನ್ ವಾಶ್ ಮಾಡಿ, ಜಿಹಾದ್ ನಡೆಸುವ ಮೂಲಕ ತಮ್ಮ ಬಲವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಿದರು. ಅಪಾಯವನ್ನು ಅರ್ಥಮಾಡಿಕೊಂಡು ಭಯೋತ್ಪಾದಕ ಸಂಘಟನೆಯ ವಿರುದ್ಧ ಹೋರಾಡಿ ಧ್ವನಿ ಎತ್ತಿದ ಅನೇಕ ಜನರನ್ನು ಕಡಿದು ಕೊಲ್ಲಲಾಯಿತು. ಧಾರ್ಮಿಕ ಮತಾಂಧತೆಯಿಂದ ದೃಷ್ಟಿ ಕಳೆದುಕೊಂಡಿರುವ ಭಯೋತ್ಪಾದಕರು ಅನೇಕರನ್ನು ಹಿಟ್ ಲಿಸ್ಟ್‍ಗೆ ಸೇರಿಸಿದ್ದಾರೆ.
ಧಾರ್ಮಿಕ ಭಯೋತ್ಪಾದಕರಿಂದ ಹತ್ಯೆಗೀಡಾದ ಆರ್‍ಎಸ್‍ಎಸ್ ಕಾರ್ಯಕರ್ತ ಶ್ರೀನಿವಾಸನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪಾಪ್ಯುಲರ್ ಫ್ರಂಟ್ ಮುಖಂಡರಿಂದ ಹಿಟ್ ಲಿಸ್ಟ್ ಬಗ್ಗೆ ಮಾಹಿತಿ ಪಡೆಯಲಾಗಿದೆ. ವಾರದ ಹಿಂದೆ ಶ್ರೀನಿವಾಸನ್ ಹತ್ಯೆ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಪಾಲಕ್ಕಾಡ್ ಜಿಲ್ಲಾ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಮತ್ತು ಪಿಎಫ್‍ಐ ಮಲಪ್ಪುರಂ ತಿರೂರ್ ವಲಯದ ಮುಖಂಡ ಸಿರಾಜುದ್ದೀನ್ ರನ್ನು ಪೋಲೀಸರು ಬಂಧಿಸಿದ್ದರು. ಇಬ್ಬರ ಲ್ಯಾಪ್ ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರಿಶೀಲಿಸಿದಾಗ ಹಿಟ್ ಲಿಸ್ಟ್ ಬೆಳಕಿಗೆ ಬಂದಿದೆ.
ಪಾಪ್ಯುಲರ್ ಫ್ರಂಟ್ ಉಗ್ರರ ಹಿಟ್ ಲಿಸ್ಟ್ ನಲ್ಲಿ ಸುಮಾರು 400 ಮಂದಿ ಪ್ರಮುಖರು ಇದ್ದರು. ಸಿರಾಜುದ್ದೀನ್ ನಿಂದ ಪತ್ತೆಯಾದ ಪಟ್ಟಿಯಲ್ಲಿ 378 ಹೆಸರುಗಳಿವೆ. ಪಾಲಕ್ಕಾಡ್ ಜಿಲ್ಲಾ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ನ ಲ್ಯಾಪ್‍ಟಾಪ್‍ನಿಂದ 380 ಜನರ ಚಿತ್ರಗಳನ್ನು ಪಡೆಯಲಾಗಿದೆ. ಸಿಐ, ಸಿವಿಲ್ ಪೋಲೀಸ್ ಅಧಿಕಾರಿ ಸೇರಿದಂತೆ ಪೋಲೀಸ್ ಅಧಿಕಾರಿಗಳು ಹಿಟ್ ಲಿಸ್ಟ್ ನಲ್ಲಿರುವುದು ಸಂಘಟನೆಯ ಕೆಂಗಣ್ಣಿನ ಆಳವನ್ನು ಬಿಂಬಿಸುತ್ತದೆ. ಎನ್‍ಐಎ ರಹಸ್ಯ ದಾಳಿಗೂ ಮುನ್ನವೇ ಪೋಲೀಸರು ಈ ಮಾಹಿತಿಯನ್ನು ಕೇಂದ್ರ ಏಜೆನ್ಸಿಗಳಿಗೆ ಹಸ್ತಾಂತರಿಸಿದ್ದರು.
ಶ್ರೀನಿವಾಸನನ್ನು ಕೊಲ್ಲುವ ಒಂದು ಗಂಟೆ ಮೊದಲು ಸಿರಾಜುದ್ದೀನ್ ಸಂಚಿನಲ್ಲಿ ಭಾಗವಹಿಸಿದ್ದ. ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಈ ಸಂಚು ನಡೆದಿದೆ. ಆತನಿಂದ ಮಲಪ್ಪುರಂನ 12 ಆರೆಸ್ಸೆಸ್ ಬಿಜೆಪಿ ನಾಯಕರ ಹೆಸರು ಮತ್ತು ಭಾವಚಿತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಾಪ್ಯುಲರ್ ಫ್ರಂಟ್ ಭಯೋತ್ಪಾದಕರ ಅಪಾಯಕಾರಿ ಲಕ್ಷ್ಯ ಬಯಲು: ಪೋಲೀಸ್ ಅಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಸೇರಿದಂತೆ 400 ಜನರ ಹಿಟ್ ಲಿಸ್ಟ್ ಪತ್ತೆ
0
ಸೆಪ್ಟೆಂಬರ್ 28, 2022
Tags