ತಿರುವನಂತಪುರ: ಪಾಪ್ಯುಲರ್ ಫ್ರಂಟ್ ನ ಶಕ್ತಿ ಕೇಂದ್ರಗಳ ತಪಾಸಣೆ ವೇಳೆ ಎನ್ ಐಎ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಇಡುಕ್ಕಿ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಮಹತ್ವದ ದಾಖಲೆಗಳು ಮತ್ತು ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯಾದ್ಯಂತ ಎನ್‍ಐಎ ತನಿಖೆ ನಡೆಯುತ್ತಿದೆ.
ತಿರುವನಂತಪುರಂ ಒಂದರಲ್ಲೇ 50 ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ಇಲ್ಲಿಂದ ನಾಲ್ಕು ಮೊಬೈಲ್ ಫೆÇೀನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಪ್ಯುಲರ್‍ಫ್ರಂಟ್ ರಾಷ್ಟ್ರೀಯ ನಾಯಕ ಅಶ್ರಫ್ ಮೌಲವಿ ಅವರ ಪೂಂತೂರ ಮನೆಯಿಂದ ಪೆನ್ ಡ್ರೈವ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎನ್‍ಐಎ ಹಲವು ಕರಪತ್ರಗಳನ್ನೂ ವಶಪಡಿಸಿಕೊಂಡಿದೆ.
ತೊಡುಪುಳ ಕುಮ್ಮಕಲ್‍ನಲ್ಲಿರುವ ಪಿಎಫ್‍ಐ ಇಡುಕ್ಕಿ ಜಿಲ್ಲಾ ಸಮಿತಿ ಕಚೇರಿಯಿಂದ ನೋಟಿಸ್‍ಗಳು ಮತ್ತು ಪುಸ್ತಕಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲಪ್ಪುಳ ಸಮ್ಮೇಳನಕ್ಕೆ ಸಂಬಂಧಿಸಿದ ನೋಟಿಸ್‍ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬೆಳಗ್ಗೆ ಇಲ್ಲಿ ತಪಾಸಣೆ ನಡೆಯಿತು.
ಎನ್‍ಐಎ ದಾಳಿ : ತಿರುವನಂತಪುರಂ ಒಂದರಲ್ಲೇ 50 ಸ್ಥಳಗಳಲ್ಲಿ ತಪಾಸಣೆ; ಮೊಬೈಲ್ ಫೆÇೀನ್‍ಗಳು ಮತ್ತು ಪೆನ್ ಡ್ರೈವ್‍ಗಳನ್ನು ವಶ
0
ಸೆಪ್ಟೆಂಬರ್ 22, 2022
Tags