ಪತ್ತನಂತಿಟ್ಟ: ಸರ್ಕಾರ ಮತ್ತು ದೇವಸ್ವಂ ಮಂಡಳಿ ಶಬರಿಮಲೆಯನ್ನು ನಿರ್ಲಕ್ಷ್ಯಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ. ಮಂಡಲ ಪೂಜೆ ಆರಂಭವಾಗಲು ಕೇವಲ ಎರಡು ತಿಂಗಳು ಬಾಕಿ ಇರುತ್ತ ತಿರುವಾಂಕೂರು ದೇವಸ್ವಂ ಮಂಡಳಿಯು ಸಿದ್ಧತೆಗಳ ಬಗ್ಗೆ ಚರ್ಚಿಸಲು ಇನ್ನೂ ಸಭೆ ಕರೆದಿಲ್ಲ.
ಸಿದ್ಧತೆಗಳನ್ನು ಮೌಲ್ಯಮಾಪನ ಮಾಡಲು ವಿಫಲವಾದರೆ ಮಂಡಲ-ಮಕರ ಮಾಸದ ಪೂಜೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
ಶಬರಿಮಲೆ ಯಾತ್ರೆ ಆರಂಭವಾಗಲು ಇನ್ನು 55 ದಿನಗಳು ಮಾತ್ರ ಬಾಕಿ ಉಳಿದಿವೆ. ಸಾಮಾನ್ಯವಾಗಿ ಈಗಾಗಲೇ ಎರಡು ಸಭೆಗಳನ್ನು ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಲಾಗುತ್ತದೆ. ಆದರೆ ತಿರುವಾಂಕೂರು ದೇವಸ್ವಂ ಮಂಡಳಿಯಾಗಲಿ ಅಥವಾ ಸರ್ಕಾರವಾಗಲಿ ಪೂರ್ವಭಾವಿ ಸಭೆಯನ್ನು ಇನ್ನೂ ಕರೆದಿಲ್ಲ. ಶಬರಿಮಲೆ ಬಗ್ಗೆ ಆಡಳಿತ ಮಂಡಳಿ ಹಾಗೂ ಸÀರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ.
ಕಳೆದ ಮಂಡಲ-ಮಕರ ಬೆಳಕು ಅವಧಿಯಲ್ಲಿ ಪೂರ್ವ ತಯಾರಿ ಇಲ್ಲದ ಕಾರಣ ಭಕ್ತರು ತೀವ್ರ ತೊಂದರೆ ಅನುಭವಿಸಿದ್ದರು.
ಯಾತ್ರೆಯ ಮೊದಲ ಹಂತದಲ್ಲಿ ಸಮರ್ಪಕ ಶೌಚಾಲಯ ಅಥವಾ ಅಗತ್ಯಕ್ಕೆ ತಕ್ಕಂತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಕಳೆದ ಬಾರಿ ವಿವಿಧ ಇಲಾಖೆಗಳ ಸಮನ್ವಯದ ಕೊರತೆ ಎದ್ದು ಕಾಣುತ್ತಿತ್ತು. ಈ ಋತುವಿನಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಎದುರಾಗುವ ನಿರೀಕ್ಷೆಯಿದೆ. ಭಕ್ತಾದಿಗಳಿಗೆ ಅವರವರ ಅಗತ್ಯಕ್ಕೆ ತಕ್ಕಂತೆ ಹರಕೆ ತೀರಿಸುವ ಸೌಲಭ್ಯಗಳು ಇನ್ನೂ ಜಾರಿಯಾಗಿಲ್ಲ.
ಮಂಡಲ ಪೂಜೆಗೆ 55 ದಿನಗಳು; ಸಿದ್ಧತೆಗಳನ್ನು ನಿರ್ಣಯಿಸಲು ಸಭೆ ನಡೆಸದ ಅಧಿಕೃತರು
0
ಸೆಪ್ಟೆಂಬರ್ 22, 2022
Tags