HEALTH TIPS

ಮೋದಿ ಜನುಮದಿನಕ್ಕೆ 56 ಇಂಚಿನ ಥಾಲಿ, ₹ 8.5 ಲಕ್ಷ ಬಹುಮಾನ.. ಇಲ್ಲಿದೆ ಮಾಹಿತಿ

 

                 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೆಹಲಿಯ ರೆಸ್ಟೋರೆಂಟ್‌ವೊಂದರಲ್ಲಿ 10 ದಿನಗಳ ಕಾಲ 56 ಇಂಚಿನ ಥಾಲಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

                 ಕನಾಟ್ ಪ್ರದೇಶದಲ್ಲಿರುವ ಆರ್ಡರ್ 2.1 ರೆಸ್ಟೊರೆಂಟ್ ಈ ಯೋಜನೆ ಆರಂಭಿಸಲು ಮುಂದಾಗಿದ್ದು, ಈ ಅವಧಿಯಲ್ಲಿ ರೆಸ್ಟೊರೆಂಟ್‌ಗೆ ಭೇಟಿ ನೀಡುವ ಜನರಲ್ಲಿ ಇಬ್ಬರು ಅದೃಷ್ಟಶಾಲಿಗಳಿಗೆ ಕೇದರಾನಾಥಕ್ಕೆ ಉಚಿತ ಪ್ರವಾಸದ ಅವಕಾಶ ಸಿಗಲಿದೆ ಎಂದು ಮಾಲೀಕ ಸುವೀತ್ ಕಾಲ್ರಾ ಹೇಳಿದ್ದಾರೆ.

                 'ನಾವು ಪ್ರಧಾನಿ ನರೇಂದ್ರ ಮೋದಿಯವರ ಬಹು ದೊಡ್ಡ ಅಭಿಮಾನಿಗಳು. ನಮ್ಮ ರೆಸ್ಟೋರೆಂಟ್‌ ವಿಶಿಷ್ಟ ಥಾಲಿಗಳಿಗೆ ಹೆಸರುವಾಸಿಯಾಗಿದೆ. 56 ಇಂಚಿನ ಥಾಲಿಯು 56 ಭಕ್ಷ್ಯಗಳ ಸಂಯೋಜನೆಯಾಗಿದೆ. ಮೋದಿಯವರ ಜನ್ಮದಿನದ ಪ್ರಯುಕ್ತ ಅವರನ್ನು ಗೌರವಿಸಲು ಈ ಭೋಜನದ ಯೋಜನೆ ಮಾಡಲಾಗಿದೆ'ಎಂದು ಕಲ್ರಾ ಪಿಟಿಐಗೆ ತಿಳಿಸಿದರು.

                 'ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 26ರ ನಡುವೆ ರೆಸ್ಟೊರೆಂಟ್‌ಗೆ ಭೇಟಿ ನೀಡಿ, ಈ ಭೋಜನ ಸವಿಯುವ ಗ್ರಾಹಕರ ಪೈಕಿ ಇಬ್ಬರು ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಅವರು ಮೋದಿಯವರ ನೆಚ್ಚಿನ ಸ್ಥಳಗಳಲ್ಲಿ ಒಂದಾದ ಕೇದಾರನಾಥಕ್ಕೆ ಉಚಿತ ಪ್ರವಾಸಕ್ಕೆ ಹೋಗುವ ಅವಕಾಶವನ್ನು ಪಡೆಯುತ್ತಾರೆ'ಎಂದು ಕಾಲ್ರಾ ಹೇಳಿದರು.

                  ' ಈ ಯೋಜನೆ ಮೂಲಕ ಕೆಲ ಗ್ರಾಹಕರಿಗೆ ಕೇದಾರನಾಥ ದೇಗುಲಕ್ಕೆ ಭೇಟಿ ನೀಡುವ ಅವಕಾಶ ಸಿಗುತ್ತದೆ. ಇದು ವೈಯಕ್ತಿಕವಾಗಿ ಮೋದಿಜಿಯವರನ್ನು ಸಂತೋಷಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ'ಎಂದು ಅವರು ಹೇಳಿದರು.

                         ಭೋಜನದಲ್ಲಿ ಒಟ್ಟು 20 ವಿಧದ ಪಲ್ಯ, ವಿವಿಧ ರೀತಿಯ ಬ್ರೆಡ್‌ಗಳು, ದಾಲ್ ಮತ್ತು ಗುಲಾಬ್ ಜಾಮೂನ್‌ ಇರುತ್ತವೆ. ಜೊತೆಗೆ, ಕುಲ್ಫಿಯ ಆಯ್ಕೆಯೂ ಇರುತ್ತದೆ.

                'ಈ ಭೋಜನವು ಉತ್ತರ ಭಾರತದ 56 ಖಾದ್ಯಗಳನ್ನು ಹೊಂದಿದೆ. ಒಂದು ಸಸ್ಯಾಹಾರಿ ಭೋಜನದ ಬೆಲೆ ₹ 2,600 ಮತ್ತು ಮಾಂಸಾಹಾರಿ ಭೋಜನವು ₹2,900 ಹಾಗೂ ತೆರಿಗೆ ಇರುತ್ತದೆ. ರಾತ್ರಿ ಊಟಕ್ಕೆ ₹ 300 ಹೆಚ್ಚಿರಲಿದೆ'ಎಂದು ಅವರು ಹೇಳಿದರು.

                  40 ನಿಮಿಷಗಳಲ್ಲಿ ಈ ಊಟ ಮಾಡಿ ಮುಗಿಸುವ ಇಬ್ಬರು ಗ್ರಾಹಕರಿಗೆ ತಲಾ ₹8.5 ಲಕ್ಷ ಬಹುಮಾನ ನೀಡಲಾಗುವುದು ಎಂದು ಕಾಲ್ರಾ ತಿಳಿಸಿದ್ದಾರೆ.

                ಈ ರೆಸ್ಟೋರೆಂಟ್‌ನಲ್ಲಿ 'ಪುಷ್ಪ ಥಾಲಿ' ಮತ್ತು 'ಬಾಹುಬಲಿ ಥಾಲಿ'ಸಹ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries