ನವದೆಹಲಿ:ಆಮ್ ಆದ್ಮಿ ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಅಧಿಕಾರಿಗಳು ಹಾಗೂ ರಾಜತಾಂತ್ರಿಕರು ಗುರುವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಅಧಿಕಾರಿಗಳು ಗುಜರಾತ್ ಚುನಾವಣೆಯಲ್ಲಿ ತಮ್ಮ ಪರವಾಗಿ ಕೆಲಸ ಮಾಡುವಂತೆ ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಅವರು ಪ್ರೇರೇಪಿಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ರಾಜ್‌ಕೋಟ್‌ನಲ್ಲಿ ಸೆಪ್ಟಂಬರ್ 3ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅರವಿಂದ ಕೇಜ್ರಿವಾಲ್ ಅವರು, ವಿಧಾನ ಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲವು ಸಾಧಿಸಲು ಸರಕಾರಿ ಅಧಿಕಾರಿಗಳು ಸಂಘಟಿತರಾಗಿ ಕಾರ್ಯ ನಿರ್ವಹಿಸಬೇಕು ಎಂದು ಪುನರುಚ್ಚರಿಸಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪತ್ರಕ್ಕೆ ಸಹಿ ಹಾಕಿದವರಲ್ಲಿ ಮಾಜಿ
ಐಎಎಸ್ ಅಧಿಕಾರಿಗಳಾದ ಎಂ. ಮದನ್ ಗೋಪಾಲ್, ಆನಂದ್ ಬೋಸ್, ಆರ್.ಡಿ. ಕಪೂರ್, ಸುಭಾಶ್
ಚಂದ್ರ, ಕೆ. ಶ್ರೀಧರ ರಾವ್, ಸಿ.ಎಸ್. ಖೈರ್ವಾಲ್ ಹಾಗೂ ಮಾಜಿ ರಾಜತಾಂತ್ರಿಕ ನಿರಂಜನ
ದೇಸಾಯಿ ಸೇರಿದ್ದಾರೆ.
''ಮುಂದಿನ ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ ಆಮ್
ಆದ್ಮಿ ಪಕ್ಷಕ್ಕೆ ನೆರವು ನೀಡುವಂತೆ ಪೊಲೀಸರು, ಗೃಹ ರಕ್ಷಕ ಸಿಬ್ಬಂದಿ, ಅಂಗನವಾಡಿ
ಕಾರ್ಯಕರ್ತೆಯರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರು-ನಿರ್ವಾಹಕರು ಹಾಗೂ
ಮತಗಟ್ಟೆಯ ಅಧಿಕಾರಿಗಳು ಸೇರಿದಂತೆ ಸರಕಾರಿ ಅಧಿಕಾರಿಗಳಿಗೆ ಕೇಜ್ರಿವಾಲ್ ಅವರು ಕರೆ
ನೀಡಿದ್ದಾರೆ'' ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ರವಾನಿಸಿದ ಪತ್ರದಲ್ಲಿ ಅವರು
ತಿಳಿಸಿದ್ದಾರೆ.
ನಾಗರಿಕ ಸೇವಾ ಅಧಿಕಾರಿಗಳನ್ನು ರಾಜಕೀಯಗಳೊಳಿಸಲು ಆಮ್ ಆದ್ಮಿ
ಪಕ್ಷ ಪ್ರಯತ್ನಿಸುತ್ತಿದೆ. ಅಂತಹ ಪ್ರಯತ್ನಗಳನ್ನು ನಾವು ವಿರೋಧಿಸುತ್ತೇವೆ ಎಂದು ಅವರು
ಹೇಳಿದ್ದಾರೆ. ನಾಗರಿಕ ಸೇವಾ ಅಧಿಕಾರಿಗಳು ಪಕ್ಷಾತೀತರು. ಅವರು ಸರಕಾರ, ಜನರಿಗೆ ಸೇವೆ
ಸಲ್ಲಿಸುತ್ತಾರೆ ಹಾಗೂ ಸಂಸತ್ತು, ಕಾರ್ಯಾಂಗ ಅಂಗೀಕರಿಸಿದ ನೀತಿಗಳನ್ನು
ಕಾರ್ಯಗತಗೊಳಿಸುತ್ತಾರೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಪ್ರಜಾಪ್ರತಿನಿಧಿ
ಕಾಯ್ದೆ-1951ರ ನಿಯಮಗಳನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು
ಉಲ್ಲಂಘಿಸುತ್ತಿದ್ದಾರೆ ಎಂದು ಮಾಜಿ ಅಧಿಕಾರಿಗಳು ಹಾಗೂ ರಾಜತಾಂತ್ರಿಕರು ಪತ್ರದಲ್ಲಿ
ಆರೋಪಿಸಿದ್ದಾರೆ.