ಕುಂಬಳೆ: ಶ್ರೀವಿಶ್ವಕರ್ಮ ಕಬ್ಬಿಣ ಕರಕುಶಲ ಕಾರ್ಮಿಕರ ಸಂಘದ 5ನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ಜರಗಿತು.
ಇದರ ಅಂಗವಾಗಿ ಹೇಮಂತ್ ಶರ್ಮ ವಿಟ್ಲ ಅವರ ನೇತೃತ್ವದಲ್ಲಿ ಶ್ರೀವಿಶ್ವಕರ್ಮ ಪೂಜೆ ಜರಗಿತು.
ಶ್ರೀದುರ್ಗಾಪರಮೇಶ್ವರೀ ಭಜನಾ ಸಂಘ ಪಡ್ರೆ ಅವರಿಂದ ಭಜನಾ ಸಂಕೀರ್ತನೆ ನಡೆಯಿತು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್ಸಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರಜ್ವಲ್ ಎಸ್.ಕೆ.ಪೆರ್ಲ, ಅಂಜನ ಕೃಷ್ಣ,ಲಕ್ಷ್ಮಿ ಪ್ರಿಯಾ ಮಲ್ಲಂಗೈ,ಭೂಮಿಕಾ ಕೊಂಡೆವೂರು,ಅಭಯ ಆಚಾರ್ಯ ಕೊಂಡೆವೂರು, ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸ್ಪರ್ಧಾಳು ಮಣಿಕಂಠ ಎಸ್ ಮುಳಿಯಾರು,ಬಿ.ಎ.ಪದವಿಯಲ್ಲಿ ದ್ವಿತೀಯ ರ್ಯಾಂಕ್ ವಿಜೇತ, ತೇಜಸ್ ಆಚಾರ್ಯ ಕೊಲ್ಲಂಗಾನ,ಕನ್ನಡ ಸ್ನಾತಕೋತ್ತರ ಪದವಿ ದ್ವಿತೀಯ ರ್ಯಾಂಕ್ ಗಳಿಸಿದ ಗಿರೀಶ್ ಆಚಾರ್ಯ ಮಜಕ್ಕಾರು, ರಾಜ್ಯ ಮಟ್ಟದ ಕ್ರೀಡಾಳು ಮುರಳಿಧರ್ ಬಜಕೂಡ್ಲು ಅವರಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.