ಲಂಡನ್: ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಹಿಂದಿಕ್ಕಿರುವ ಭಾರತ 5ನೇ ಸ್ಥಾನಕ್ಕೇರಿದ್ದು, ಬ್ರಿಟನ್ ಆರನೇ ಸ್ಥಾನಕ್ಕೆ ಕುಸಿದಿದೆ.
ಬ್ರಿಟನ್ ನಲ್ಲಿನ ಅತೀ ಹೆಚ್ಚಿನ ಜೀವನ ವೆಚ್ಚದ ಆಘಾತ ಎದುರಿಸುತ್ತಿರುವ ಸರ್ಕಾರಕ್ಕೆ ಮತ್ತಷ್ಟು ಹೊಡೆತ ನೂತನ ವಿಶ್ವದ ಅತಿದೊಡ್ಡ ಆರ್ಥಿಕತೆಯ ಮತ್ತೊಂದು ಹೊಡೆತ ನೀಡಿದ್ದು, ಪಟ್ಟಿಯಲ್ಲಿ ಒಂದು ಸ್ಥಾನ ಕುಸಿದಿರುವ ಬ್ರಿಟನ್ 6ನೇ ಸ್ಥಾನಕ್ಕೆ ಕುಸಿದಿದ್ದು, ಭಾರತ ಒಂದು ಸ್ಥಾನ ಮೇಲೆರಿ 5ನೇ ಸ್ಥಾನಕ್ಕೇರಿದೆ. 2021 ರ ಅಂತಿಮ ತ್ರೈಮಾಸಿಕ ವರದಿಯಲ್ಲಿ ಭಾರತವು ಬ್ರಿಟನ್ ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ GDP ಅಂಕಿಅಂಶಗಳ ಪ್ರಕಾರ ಭಾರತವು ಮೊದಲ ತ್ರೈಮಾಸಿಕದಲ್ಲಿ ತನ್ನ ಮುನ್ನಡೆಯನ್ನು ವಿಸ್ತರಿಸಿದ್ದು, ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಏರಿಕೆಯಾಗಿದೆ.
ಪಟ್ಟಿಯಲ್ಲಿ ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, 2ನೇ ಸ್ಥಾನದಲ್ಲಿ ಚೀನಾ, ಜಪಾನ್ 3 ಮತ್ತು ಜರ್ಮನಿ 4ನೇ ಸ್ಥಾನದಲ್ಲಿದೆ ಎನ್ನಲಾಗಿದೆ. 5ನೇ ಸ್ಥಾನದಲ್ಲಿ ಭಾರತವಿದ್ದು, ಬ್ರಿಟನ್ 6ನೇ ಸ್ಥಾನಕ್ಕೆ ಕುಸಿದಿದೆ. ಇದೇ ಭಾರತ ಈಗ್ಗೆ ದಶಕದ ಹಿಂದೆ 11ನೇ ಸ್ಥಾನದಲ್ಲಿತ್ತು. ಬ್ರಿಟನ್ 5ನೇ ಸ್ಥಾನದಲ್ಲಿತ್ತು ವರದಿ ಉಲ್ಲೇಖಿಸಿದೆ.
ಬ್ರಿಟನ್ ಚುನಾವಣೆ ಪ್ರಭಾವಹಾಲಿ ಬಿಡುಗಡೆಯಾಗಿರುವ ಅಂತಾರಾಷ್ಟ್ರೀಯ ಶ್ರೇಯಾಂಕದಲ್ಲಿ ಬ್ರಿಟನ್ ಕುಸಿತವು ಹೊಸ ಪ್ರಧಾನ ಮಂತ್ರಿಗೆ ಅನಪೇಕ್ಷಿತ ಹಿನ್ನೆಲೆಯಾಗಿದ್ದು, ಕನ್ಸರ್ವೇಟಿವ್ ಪಕ್ಷದ ಸದಸ್ಯರು ಸೋಮವಾರ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತಿರುವ ಹೊತ್ತಿನಲ್ಲೇ ವರದಿ ಪ್ರಕಟವಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಮಾಜಿ ಚಾನ್ಸೆಲರ್ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿ ರೇಸ್ ನಲ್ಲಿದ್ದು, ನಾಲ್ಕು ದಶಕಗಳಲ್ಲಿ ವೇಗವಾಗಿ ಹಣದುಬ್ಬರವನ್ನು ಎದುರಿಸುತ್ತಿರುವ ಬ್ರಿಟನ್ ರಾಷ್ಟ್ರವನ್ನು ವಿಜೇತರು ವಹಿಸಿಕೊಳ್ಳಲ್ಲಿದ್ದಾರೆ.