ಕುಂಬಳೆ: ಭೂ ಮತ್ತು ಜಲ ಇಲಾಖೆಯಿಂದ ನಡೆದ ಬಾವಿ ಗಣತಿ ಜಿಲ್ಲೆಯಲ್ಲಿ 60 ವಾರ್ಡ್‍ಗಳನ್ನು ಪೂರ್ಣಗೊಳಿಸಿದೆ. ಯೋಜನೆಯು ಅಂತರ್ಜಲ ಸಂಪನ್ಮೂಲಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸುತ್ತದೆ. ರಾಷ್ಟ್ರೀಯ ಜಲವಿಜ್ಞಾನ ಯೋಜನೆಯ ಭಾಗವಾಗಿ, ಕುಟುಂಬಶ್ರೀ ಸಹಯೋಗದಲ್ಲಿ ಭೂ ಮತ್ತು ಜಲ ಇಲಾಖೆಯು ಗಣತಿಯನ್ನು ನಡೆಸುತ್ತಿದೆ. ಮೊದಲ ಹಂತದಲ್ಲಿ ಜಿಲ್ಲೆಯ ಕಾಸರಗೋಡು, ಕಾಞಂಗಾಡು, ಮಂಜೇಶ್ವರ, ಕಾರಡ್ಕ ಮತ್ತು ನೀಲೇಶ್ವರ ಬ್ಲಾಕ್‍ಗಳಲ್ಲಿ ಯೋಜನೆ ಅನುμÁ್ಠನಗೊಳಿಸಲಾಗುತ್ತಿದೆ.
ಜಿಲ್ಲೆಯಲ್ಲಿ 60 ವಾರ್ಡ್‍ಗಳಲ್ಲಿ 81830 ಸಮೀಕ್ಷೆಗಳು ಪೂರ್ಣಗೊಂಡಿವೆ. ಅಂಕಿ ಅಂಶಗಳಂತೆ ಕಾಞಂಗಾಡ್ 14789, ಕಾರಡ್ಕ 11894, ಮಂಜೇಶ್ವರ 16607, ಕಾಸರಗೋಡು 20181 ಮತ್ತು ನೀಲೇಶ್ವರ 18359 ಬಾವಿಗಳನ್ನು ಗುರುತಿಸಲಾಗಿದೆ. ಕ್ಷೇತ್ರ ಮಟ್ಟದ ಸಮೀಕ್ಷೆ ನಡೆಸಿ ಜಲಮೂಲಗಳ ಮಾಹಿತಿ ಸಂಗ್ರಹಿಸಲಾಯಿತು. ಇದಕ್ಕಾಗಿ ನೀರಿವ್ ಎಂಬ ಮೊಬೈಲ್ ಆಪ್ ಬಳಸಲಾಗಿದೆ. ‘ನೀರಿವ್’ ಮೂಲಕ ಕೆರೆ, ಚಿಲುಮೆ, ಬಾವಿ, ಕೊಳವೆ ಬಾವಿಗಳ ಮಾಹಿತಿ ಸಂಗ್ರಹಿಸಲಾಯಿತು.
ಭವಿಷ್ಯದಲ್ಲಿ ಅಂತರ್ಜಲದ ಬಳಕೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರತಿ ಪ್ರದೇಶದ ಅಗತ್ಯಗಳಿಗೆ ಅನುಗುಣವಾಗಿ ಯೋಜನೆ ತಯಾರಿಸಲು, ಅಂತರ್ಜಲ ಸಾಮಥ್ರ್ಯವನ್ನು ಹೆಚ್ಚಿಸಲು, ಅಂತರ್ಜಲ ಗುಣಮಟ್ಟವನ್ನು ಸುಧಾರಿಸಲು ಯೋಜನೆಯು ಸಹಾಯ ಮಾಡುತ್ತದೆ. ಪ್ರವಾಹ ಮತ್ತು ಭೂಕುಸಿತ ಪೀಡಿತ ಪ್ರದೇಶಗಳನ್ನು ಮೊದಲೇ ಗುರುತಿಸಿ ಮುನ್ನೆಚ್ಚರಿಕೆ ವಹಿಸುವ ರೀತಿಯಲ್ಲಿ ಯೋಜನೆ ಅನುμÁ್ಠನಗೊಳಿಸಲಾಗುತ್ತಿದೆ. ಇದರ ಮೂಲಕ, ನೀರನ್ನು ಹೇಗೆ ಬಳಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಿದೆ. ತರಬೇತಿ ಪಡೆದ ಕುಟುಂಬಶ್ರೀ ಮಿಷನ್ ಕಾರ್ಯಕರ್ತರ ಸಹಾಯದಿಂದ ಸಮೀಕ್ಷೆಯನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ 11 ಮೇಲ್ವಿಚಾರಕರು ಮತ್ತು 125 ಗಣತಿದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ತಿಂಗಳೊಳಗೆ ಸಮೀಕ್ಷೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಜುಲೈ 21ರಂದು ಸಮೀಕ್ಷೆ ಆರಂಭವಾಗಿದೆ.
ಅಂತರ್ಜಲ ಸಂಪನ್ಮೂಲಗಳ ಮಾಹಿತಿ ಸಂಗ್ರಹ: 60 ವಾರ್ಡ್‍ಗಳಲ್ಲಿ ಬಾವಿ ಗಣತಿ ಪೂರ್ಣ
0
ಸೆಪ್ಟೆಂಬರ್ 25, 2022
Tags