HEALTH TIPS

ಕೇರಳ: ಓಣಂ ಸಂದರ್ಭ ಒಂದು ವಾರದಲ್ಲಿ 624 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟ ಮಾಡಿದ ಬೆವ್ಕೋ

 

            ತಿರುವನಂತಪುರಂ: ಈ ಓಣಂ ಋತುವಿನಲ್ಲಿ ಕೇರಳ ರಾಜ್ಯದ ಬೊಕ್ಕಸಕ್ಕೆ 624 ಕೋಟಿ ರೂಪಾಯಿಗಳನ್ನು ಬೆವ್ಕೊ ಎಂದೂ ಕರೆಯಲಾಗುವ ಕೇರಳ ರಾಜ್ಯ ಪಾನೀಯಗಳ ನಿಗಮ (ಕೆಎಸ್‌ಬಿಸಿ) ನೀಡಿದ್ದು, ಸೆಪ್ಟೆಂಬರ್ 1-7 ರವರೆಗೆ ದಾಖಲೆಯ ಮದ್ಯ ಮಾರಾಟವಾಗಿದೆ.

                       ಕೇರಳದ ಐದು ಮಳಿಗೆಗಳಾದ ಕೊಲ್ಲಂನ ಆಶ್ರಮಮ್, ತಿರುವನಂತಪುರಂನ ಪವರ್ ಹೌಸ್ ರಸ್ತೆ, ತ್ರಿಶ್ಶೂರ್‌ನ ಇರಿಂಜಲಕುಡ, ಚೆರ್ತಲದ ಕೋರ್ಟ್ ಜಂಕ್ಷನ್ ಮತ್ತು ಕಣ್ಣೂರಿನ ಪಯ್ಯನ್ನೂರ್‌ಗಳಲ್ಲಿ ಸೆಪ್ಟೆಂಬರ್ 7 ರ 'ಉತ್ರಾಡಮ್ ದಿನ'ದಂದು ಅಂದರೆ ಓಣಂಗೂ ಒಂದು ದಿನ ಮೊದಲು ತಲಾ ಒಂದು ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ.

              ಆಶ್ರಮಮ್ ಔಟ್ಲೆಟ್‌ನಲ್ಲಿ ಬುಧವಾರದಂದು 1.06 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದ್ದು, ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ಎನ್ನಲಾಗಿದೆ.

                 ಈ ಉತ್ರಾಡಮ್ ದಿನದಂದು ಬೆವ್ಕೋ ದಾಖಲೆಯ 118 ಕೋಟಿ ರೂಪಾಯಿಯ ಮದ್ಯ ಮಾರಾಟ ಮಾಡಿದೆ. ಕಳೆದ ವರ್ಷ ಇದು 81 ಕೋಟಿ ರೂಪಾಯಿ ಆಗಿತ್ತು. ಅಂದು ಕೆಲವು ಮಳಿಗೆಗಳಲ್ಲಿ 10,000ಕ್ಕೂ ಹೆಚ್ಚು ಜನರು ಸೇರಿದ್ದರು. ಸೆಪ್ಟೆಂಬರ್ 1 ರಿಂದ 11 ರವರೆಗೆ ಓಣಂ ಸೀಸನ್. ಹೀಗಾಗಿ ಸೆಪ್ಟೆಂಬರ್ 1 ರಿಂದ 7 ರ ಅವಧಿಯಲ್ಲಿ ನಾವು ದಾಖಲೆಯ 624 ಕೋಟಿ ರೂಪಾಯಿಯ ಮಾರಾಟವನ್ನು ಹೊಂದಿದ್ದೇವೆ ಎಂದು ಬೆವ್ಕೊ ಸಿಎಂಡಿ ಯೋಗೇಶ್ ಗುಪ್ತಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

                ಕಳೆದ ವರ್ಷ ಓಣಂ ಋತುವಿನಲ್ಲಿ 561 ಕೋಟಿ ರೂ. ಆಗಿತ್ತು. ಆದರೆ, ಈ ಬಾರಿ ಓಣಂ ಸೀಸನ್ ಮುಗಿಯದಿದ್ದರೂ ಈಗಾಗಲೇ 634 ಕೋಟಿ ರೂಪಾಯಿಯ ಮದ್ಯ ಮಾರಾಟವಾಗಿದೆ. 'ಕಳೆದ ವರ್ಷಕ್ಕೆ ಹೋಲಿಸಿದರೆ ಈಗಾಗಲೇ ಶೇ 30 ರಷ್ಟು ಹೆಚ್ಚಳವಾಗಿದ್ದು, ಈ ಓಣಂ ಋತುವಿನ ಅಂತ್ಯದ ವೇಳೆಗೆ ನಾವು 750 ಕೋಟಿ ರೂಪಾಯಿಗಳ ಮಾರಾಟವನ್ನು ನಿರೀಕ್ಷಿಸಿದ್ದೇವೆ' ಎಂದು ಗುಪ್ತಾ ಹೇಳಿದರು.

            ರಾಜ್ಯಾದ್ಯಂತ 301 ಸರ್ಕಾರಿ ಮದ್ಯದಂಗಡಿಗಳಿವೆ. 2020 ರಲ್ಲಿ ಸರ್ಕಾರವು ಹೆಚ್ಚುವರಿ ಆದಾಯವನ್ನು ಪಡೆಯಲು ಮದ್ಯದ ಬೆಲೆಯನ್ನು ಶೇ 10-35 ರಷ್ಟು ಹೆಚ್ಚಿಸಿತು.

                  ಸದ್ಯ ಐಎಂಎಲ್‌ಎಫ್ (ಭಾರತೀಯ ನಿರ್ಮಿತ ವಿದೇಶಿ ಮದ್ಯ) ಮೇಲಿನ ಮಾರಾಟ ತೆರಿಗೆಯು 400 ರೂ.ವರೆಗಿನ ಬ್ರಾಂಡ್‌ಗಳಿಗೆ ಶೇ 237 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಮದ್ಯಕ್ಕೆ ಶೇ 247 ಆಗಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries