ಕಾಸರಗೋಡು: ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ನಡೆದ 67ನೇ ವರ್ಷದ ಗಣೇಶೋತ್ಸವ ಕಾಸರಗೋಡಿನಲ್ಲಿ ಭಾನುವಾರ ಸಂಭ್ರಮದ ತೆರೆ ಕಂಡಿತು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ಆರಂಭಗೊಂಡ ಗಣಪತಿ ವಿಸರ್ಜನೆಯ ಆಕರ್ಷಕ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಛತ್ರಪತಿ ಶಿವಾಜಿ, ಯಕ್ಷಗಾನ ವೇಷಧಾರಿಗಳು, ಗಣಪತಿ ಸೇರಿದಂತೆ ಹಲವು ಟ್ಯಾಬ್ಲೋಗಳು ಗಮನ ಸೆಳೆಯಿತು. ಆ. 31ರಂದು ಕೇಳುಗುಡ್ಡೆ ಶ್ರೀ ಅಯ್ಯಪ್ಪ ಮಂದಿರದಿಂದ ಶ್ರೀಗಣೇಶ ವಿಗ್ರಹವನ್ನು ಭವ್ಯ ಮೆರವಣಿಗೆಯೊಂದಿಗೆ ಶ್ರೀಮಲ್ಲಿಕಾರ್ಜುನ ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪನೆಗೊಳಿಸುವ ಮೂಲಕ ಐದು ದಿವಸಗಳ ಪೂಜೆಯ ನಂತರ ಕಾಸರಗೋಡು ರೈಲ್ವೆ ನಿಲ್ದಾಣ ರಸ್ತೆಯ ಶ್ರೀರಾಮಪೇಟೆ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದ ಶ್ರೀಲಕ್ಷ್ಮೀಸರೋವರದಲ್ಲಿ ಜಲಸ್ತಂಭನಗೊಳಿಸಲಾಯಿತು.