ನವದೆಹಲಿ: ಕೋವಿಡ್-19ಗೆ ಸಂಬಂಧಿಸಿದ ಮಾಹಿತಿ ಪಡೆಯುವ ಸಲುವಾಗಿ 2021ರ ಸೆಪ್ಟೆಂಬರ್‌ನಿಂದ ಕಳೆದ ಆಗಸ್ಟ್ 15ರ ವರೆಗಿನ ಅವಧಿಯಲ್ಲಿ ಸಹಾಯವಾಣಿ 1075ಕ್ಕೆ 6.62 ಲಕ್ಷಕ್ಕೂ ಅಧಿಕ ಕರೆಗಳು ಬಂದಿವೆ.
'ಕೋವಿನ್' ಪೋರ್ಟಲ್‌ನಲ್ಲಿ ನೋಂದಣಿ ಹಾಗೂ ಲಸಿಕೆ ಪಡೆಯಲು ದಿನ ನಿಗದಿಗಾಗಿ ಇದೇ ಅವಧಿಯಲ್ಲಿ 7.55 ಲಕ್ಷಕ್ಕೂ ಅಧಿಕ ಕರೆಗಳು ಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.