ಕೊಚ್ಚಿ: ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಕಸ್ಟಮ್ಸ್ ಚಾರ್ಜ್ ಶೀಟ್ ನಲ್ಲಿ ಆರನೇ ಆರೋಪಿಯಾಗಿದ್ದಾರೆ. ಚಾರ್ಜ್ ಶೀಟ್ ಪ್ರಕಾರ, ಯುಎಇ ಕಾನ್ಸುಲ್ ಜನರಲ್ ಒಳಗೊಂಡ ಡಾಲರ್ ಕಳ್ಳಸಾಗಣೆ ಬಗ್ಗೆ ಶಿವಶಂಕರ್ ಅವರಿಗೆ ತಿಳಿದಿದ್ದರೂ ಅವರು ವಿಷಯವನ್ನು ಮರೆಮಾಚಿದ್ದಾರೆ.
ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರ ಬ್ಯಾಂಕ್ ಲಾಕರ್‍ನಲ್ಲಿ ಶಿವಶಂಕರ್ ಅವರ ಹಣವಿತ್ತು ಎಂದು ಕಸ್ಟಮ್ಸ್ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಲೈಫ್ ಮಿಷನ್ ಯೋಜನೆಯಲ್ಲಿ ಬಂದ ಕಮಿಷನ್ ಲಾಕರ್ ನಲ್ಲಿತ್ತು. ಯುಎಇ ಕಾನ್ಸುಲೇಟ್‍ನ ಮಾಜಿ ಅಧಿಕಾರಿ ಖಾಲಿದ್ ಮೊಹಮ್ಮದ್ ಅಲ್ ಶೌಕ್ರಿ ಮೊದಲ ಆರೋಪಿ. ಇತರ ಆರೋಪಿಗಳೆಂದರೆ ಸರಿತ್, ಸ್ವಪ್ನಾ ಸುರೇಶ್, ಸಂದೀಪ್, ಸಂತೋμï ಈಪನ್ ಮತ್ತು ಎಂ ಶಿವಶಂಕರ್.
ಚಾರ್ಜ್ ಶೀಟ್ ಪ್ರಕಾರ ಶಿವಶಂಕರ್ ಡಾಲರ್ ಕಳ್ಳಸಾಗಣೆಯಲ್ಲಿ ಪ್ರಮುಖ ಯೋಜಕನಾಗಿದ್ದು, ಡಾಲರ್ ಕಳ್ಳಸಾಗಣೆಯನ್ನು ಮರೆಮಾಚಿದ್ದರು. ತನಿಖಾ ತಂಡವು ಆರ್ಥಿಕ ಅಪರಾಧಗಳ ಕುರಿತು ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಲೈಫ್ ಮಿಷನ್ ವ್ಯವಹಾರದಲ್ಲಿ ಶಿವಶಂಕರ್ 1 ಕೋಟಿ ರೂಪಾಯಿ ಕಮಿಷನ್ ಪಡೆದಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಸ್ವಪ್ನಾ ಅವರ ಲಾಕರ್‍ನಲ್ಲಿರುವ ಮೊತ್ತ ಶಿವಶಂಕರ್ ಪಡೆದ ಕಮಿಷನ್ ಆಗಿದೆ. ಶಿವಶಂಕರ್ ಅವರು ಕಾನ್ಸುಲೇಟ್ ಮೂಲಕ ವಹಿವಾಟಿನ ಬಗ್ಗೆ ತಿಳಿದಿದ್ದರು ಎಂದೂ ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಪ್ರಕರಣದಲ್ಲಿ ಒಟ್ಟು 40 ಪುಟಗಳ ಚಾರ್ಜ್ ಶೀಟ್ ಅನ್ನು ಕಸ್ಟಮ್ಸ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಸ್ವಪ್ನಾ ಸುರೇಶ್ ಸೇರಿದಂತೆ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ಸಾಮಾನುಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಮುಖ್ಯ ಕಾರ್ಯದರ್ಶಿ ಮಟ್ಟದ ತನಿಖಾ ಸಮಿತಿಯು ಆರೋಪಿಗಳೊಂದಿಗೆ ನಿಕಟತೆಯನ್ನು ಕಂಡುಕೊಂಡ ನಂತರ ಐಟಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಶಿವಶಂಕರ್ ಅವರನ್ನು ಜುಲೈ 17, 2020 ರಂದು ಅಮಾನತುಗೊಳಿಸಲಾಯಿತು. ಶಿವಶಂಕರ್ ಅವರನ್ನು ಬಳಿಕ ಜನವರಿ 2022 ರಲ್ಲಿ ಸೇವೆಗೆ ಮರು ನೇಮಕಮಾಡಲಾಗಿದೆ.
ಡಾಲರ್ ಕಳ್ಳಸಾಗಣೆ ಪ್ರಕರಣ: 6ನೇ ಆರೋಪಿ ಶಿವಶಂಕರ್, ಸ್ವಪ್ನಾ ಲಾಕರ್‍ನಲ್ಲಿದ್ದ ಹಣ ಶಿವಶಂಕರ್ ಅವರದ್ದು ಎಂದು ಚಾರ್ಜ್‍ಶೀಟ್
0
ಸೆಪ್ಟೆಂಬರ್ 29, 2022