ನವದೆಹಲಿ/ಕೋಲ್ಕತ್ತ: ಮೊಬೈಲ್ ಗೇಮಿಂಗ್ ಆಯಪ್ ಪ್ರಚಾರಕರ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತ್ತದ ಆರು ಕಡೆ ಶೋಧ ಕಾರ್ಯಾಚರಣೆ ನಡೆಸಿ ₹ 7 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಇ-ನುಗ್ಗೆಟ್ಸ್' ಗೇಮಿಂಗ್ ಆಯಪ್‌ನ ಪ್ರಚಾರಕನನ್ನು ಅಮೀರ್ ಖಾನ್ ಎಂದು ಗುರುತಿಸಲಾಗಿದೆ ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.
ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ 2021ರಲ್ಲಿ ಕೋಲ್ಕತ್ತ ಪೊಲೀಸರು ಈ ಕಂಪನಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಈ ಆಯಪ್‌ನ ನಿರ್ವಾಹಕರಿಗೆ ಚೀನಾ ನಿಯಂತ್ರಣದಲ್ಲಿರುವ ಆಯಪ್‌ಗಳ ಜೊತೆ ನಂಟಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.