HEALTH TIPS

ಭಾರತದ ಜೈಲುಗಳಲ್ಲಿ ಶೇ.75 ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳು: ಎನ್‌ಸಿಆರ್‌ಬಿ ವರದಿ

                ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಭಾರತದ ಜೈಲುಗಳಲ್ಲಿ (prison) ಇರುವ ಕೈದಿಗಳಲ್ಲಿ 77% ಕೈದಿಗಳು ವಿಚಾರಣಾಧೀನ ಕೈದಿಗಳು(undertrials) ಎಂದು ತಿಳಿದು ಬಂದಿದೆ. 5,54,034 ಕೈದಿಗಳಲ್ಲಿ, 4,27,165 ಕೈದಿಗಳು 2021 ರಲ್ಲಿ ವಿಚಾರಣಾಧೀನ ಕೈದಿಗಳು, 2020ಕ್ಕೆ ಹೋಲಿಸಿದರೆ ಈ ಸಂಖ್ಯೆ 14.9 ಶೇಕಡಾ ಹೆಚ್ಚಳವಾಗಿದೆ.

               2020 ರಲ್ಲಿ ಜೈಲಿನಲ್ಲಿದ್ದ 3,71,848 ವಿಚಾರಣಾಧೀನ ಕೈದಿಗಳಿದ್ದರು ಎಂದು moneycontrol ವರದಿ ಮಾಡಿದೆ.

                   ಜಿಲ್ಲಾ ಕಾರಾಗೃಹಗಳು ಅತಿ ಹೆಚ್ಚು ವಿಚಾರಣಾಧೀನ ಕೈದಿಗಳ ಪಾಲು ಹೊಂದಿದ್ದು, ಜಿಲ್ಲಾ ಕಾರಾಗೃಹಗಳ ಒಟ್ಟು ಕೈದಿಗಳಲ್ಲಿ ಶೇಕಡಾ 51.4 ರಷ್ಟು ಕೈದಿಗಳು ವಿಚಾರಣಾಧೀನ ಕೈದಿಗಳು. ಕೇಂದ್ರ ಕಾರಾಗೃಹಗಳು (ಶೇ 36.2) ಮತ್ತು ಉಪ ಕಾರಾಗೃಹಗಳು (ಶೇ 10.4) ನಂತರದ ಸ್ಥಾನದಲ್ಲಿವೆ.

                 ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚುತ್ತಿದೆ ಮಾತ್ರವಲ್ಲ, ಕೈದಿಗಳನ್ನು ಹಿಡಿದಿಟ್ಟುಕೊಳ್ಳುವ ಜೈಲುಗಳ ಸಾಮರ್ಥ್ಯವೂ ಮೀರಿದೆ. ಅದಾಗ್ಯೂ, ಅಧಿಕಾರಿಗಳು ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಅನುಸರಿಸಿದರೆ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳ ಸಂಖ್ಯೆಯನ್ನು ಗಣನೀಯ ಕಡಿಮೆ ಮಾಡಬಹುದು ಎಂದು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಹೇಳಿದ್ದಾರೆ.

                 'ವಂಚನೆ ಅಪರಾಧವೊಂದಕ್ಕೆ ಏಳು ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಾಗಿದ್ದರೆ, ನಂತರ ಬಂಧನಕ್ಕೊಳಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ಇದನ್ನು ನಿರ್ಲಕ್ಷಿಸಲಾಗುತ್ತಿದೆ. ಅಲ್ಲದೆ, ದೇಶಾದ್ಯಂತ ಪೊಲೀಸರು ಕ್ಷುಲ್ಲಕ ಆರೋಪಗಳನ್ನು ಆಧರಿಸಿ ಬಂಧಿಸುವುದನ್ನು ಮುಂದುವರೆಸಿದ್ದಾರೆ, 'ಎಂದು ಗೊನ್ಸಾಲ್ವೆಸ್ ಹೇಳಿದ್ದಾರೆ. "ನ್ಯಾಯಾಲಯದ ಈ ಆದೇಶವನ್ನು ಸ್ವತಃ ಜಾರಿಗೊಳಿಸುವುದರಿಂದ ದೇಶದಲ್ಲಿ ಕೈದಿಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗುತ್ತದೆ." ಎಂದು ಅವರು ಅಭಿಪ್ರಾಯಿಸಿದ್ದಾರೆ.

                 ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ಉಳಿಯಲು ಪ್ರಕರಣಗಳ ವಿಲೇವಾರಿಯಾಗದೆ ಬಾಕಿಯಾಗುವುದೇ ಪ್ರಮುಖ ಕಾರಣವಾಗಿದೆ. 2021 ರ ಅಂತ್ಯದ ವೇಳೆಗೆ 14.4 ಮಿಲಿಯನ್‌ಗಿಂತಲೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಭಾರತೀಯ ನ್ಯಾಯಾಲಯಗಳಲ್ಲಿ ವರ್ಷದಲ್ಲಿ ದಾಖಲೆಯಾಗುವ ಒಟ್ಟಾರೆ ಪ್ರಕರಣಗಳಲ್ಲಿ ಶೇಕಡಾ 91.2 ರಷ್ಟು ಬಾಕಿ ಉಳಿದಿವೆ ಎಂದು ವರದಿಯಾಗಿದೆ.

               'ದೇಶದಲ್ಲಿ ಹೆಚ್ಚುತ್ತಿರುವ ವಿಚಾರಣಾಧೀನ ಕೈದಿಗಳ ಸಂಖ್ಯೆಗೆ ನ್ಯಾಯಾಂಗದ ವಿಳಂಬವು ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದೀರ್ಘಕಾಲದವರೆಗೆ ಬಾಕಿ ಉಳಿದಿವೆ' ಎಂದು ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಮಾಜಿ ನಿರ್ದೇಶಕ ಶಂಕರ್ ಸೇನ್ ಹೇಳಿದ್ದಾರೆ.

                ಜಾಮೀನು ಮಂಜೂರು ಮಾಡುವುದನ್ನು ಸುಗಮಗೊಳಿಸಲು ಕೇಂದ್ರ ಸರ್ಕಾರ ಕಾನೂನನ್ನು ಪರಿಚಯಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸೂಚಿಸಿದೆ. ಆದರೆ ತಜ್ಞರು ಅಂತಹ ಶಾಸನದ ಪರಿಣಾಮಕಾರಿತ್ವದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

              ಸಿಆರ್‌ಪಿಸಿ (ಕ್ರಿಮಿನಲ್ ಪ್ರೊಸೀಜರ್ ಕೋಡ್) ಯಲ್ಲಿ ಈಗಾಗಲೇ ಸಾಕಷ್ಟು ಜಾಮೀನು ನಿಬಂಧನೆಗಳಿವೆ. ಇಂದು ವಿಚಾರಣಾಧೀನ ಕೈದಿಗಳು ಎದುರಿಸುತ್ತಿರುವ ಹೆಚ್ಚಿನ ಸಮಸ್ಯೆಗಳು ಬಡತನ, ಸರಿಯಾದ ಕಾನೂನು ಸಹಾಯದ ಕೊರತೆ ಮತ್ತು ನ್ಯಾಯಾಂಗದೊಳಗಿನ ಸಂವೇದನಾಶೀಲತೆಯ ಕೊರತೆಯಿಂದ ಹುಟ್ಟಿಕೊಂಡಿವೆ. ಈ ಸಮಸ್ಯೆಗಳನ್ನು ಪರಿಹರಿಸದೆ ಹೊಸ ಜಾಮೀನು ಕಾಯಿದೆಯನ್ನು ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಕೆ ಚಂದ್ರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries