ತಿರುವನಂತಪುರಂ: ಭಯೋತ್ಪಾದಕ ಚಟುವಟಿಕೆಗಳಿಗಾಗಿ ಬಂಧಿತರಾಗಿರುವ ಪಾಪ್ಯುಲರ್ ಫ್ರಂಟ್ ಅಧ್ಯಕ್ಷ ಒಎಂಎ ಸಲಾಂ ಗೆ ಕೆಎಸ್‍ಇಬಿ ಅಮಾನತು ಅವಧಿಯಲ್ಲೂ ನಿಯಮ ಉಲ್ಲಂಘಿಸಿ ವೇತನ ಪಾವತಿಸಿರುವುದು ಬೆಳಕಿಗೆ ಬಂದಿದೆ.
ಕೆಎಸ್‍ಇಬಿಯಿಂದ ಸಲಾಂ 67,600 ರೂ.ವೇತನ ಪಡೆದಿರುವನು. ಕಳೆದ ಆರ್ಥಿಕ ವರ್ಷದಲ್ಲಿ ಆತ 7.84 ಲಕ್ಷ ರೂ.ಗಳನ್ನು ಸಂಬಳವಾಗಿ ಪಡೆದಿದ್ದಾನೆ. ಈ ರೀತಿಯ ವೇತನ ವಿತರಣೆಯು ಮಾನದಂಡಗಳನ್ನು ಮೀರಿದೆ.
ಕೆಎಸ್‍ಇಬಿಯಲ್ಲಿ ಹಿರಿಯ ಸಹಾಯಕನಾಗಿದ್ದ ಸಲಾಂ ನನ್ನು 2020ರ ಡಿಸೆಂಬರ್‍ನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಿಸಿದ್ದಕ್ಕಾಗಿ ಬಂಧಿಸಲಾಗಿತ್ತು. ಈತ ಕೆಎಸ್‍ಇಬಿ ಮಂಚೇರಿ ವಿಭಾಗದ ಪ್ರಾದೇಶಿಕ ಲೆಕ್ಕ ಪರಿಶೋಧನಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ನಂತರ ಕೆಎಸ್‍ಇಬಿಯಿಂದ ಸಲಾಂ ಅಮಾನತುಗೊಂಡಿದ್ದ. ಕಾನೂನಿನ ಪ್ರಕಾರ, ಅಮಾನತುಗೊಂಡ ವ್ಯಕ್ತಿಗೆ ಆರು ತಿಂಗಳ ಜೀವನಾಧಾರ ಭತ್ಯೆ ನೀಡಬೇಕು.
ಅಷ್ಟರಲ್ಲಿ ಅಮಾನತಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಈ ಅವಧಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅಮಾನತು ಅವಧಿಯನ್ನು ವಿಸ್ತರಿಸಿ ವೇತನ ನೀಡಬೇಕು. ಈ ಕಾನೂನನ್ನು ಆಧರಿಸಿ ಸರ್ಕಾರದಿಂದ ಸಲಾಂಗೆ ಸಂಬಳ ನೀಡಲಾಗಿದೆ. ತನಿಖಾಧಿಕಾರಿಗಳು ಆತನ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಆದರೆ ಅಧಿಕಾರಿಗಳು ಈ ಸಾಕ್ಷ್ಯವನ್ನು ಪರಿಗಣಿಸದೆ ತನಿಖೆ ಮುಂದುವರಿಸಿದ್ದಾರೆ.
ಸಂಬಳ ನೀಡಿರುವ ಬಗ್ಗೆ ಮಾಹಿತಿ ತಿಳಿಯದಂತೆ ಕಂಪ್ಯೂಟರ್ ವ್ಯವಸ್ಥೆಯನ್ನು ಬೈಪಾಸ್ ಮಾಡಿ ಹಣ ಬಿಡುಗಡೆ ಮಾಡಲಾಗಿದೆ. ಸಲಾಮ್ 2003 ರಿಂದ 2010 ರವರೆಗೆ ರಜೆಯಲ್ಲಿದ್ದ. ನಂತರ ಆರೋಗ್ಯ ಸಮಸ್ಯೆಯ ಕಾರಣ ನೀಡಿ ರಜೆ ತೆಗೆದುಕೊಂಡ. ಈ ರೀತಿಯ ರಜೆಯನ್ನು ಭಯೋತ್ಪಾದಕ ಚಟುವಟಿಕೆಗಳನ್ನು ಮುನ್ನಡೆಸಲು ಬಳಸಲಾಗುತ್ತಿತು. ಸಲಾಂ ಬಂಧನವಾಗಿದ್ದರೂ ಕೆಎಸ್‍ಇಬಿ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
ಭಯೋತ್ಪಾದನೆ: ಅಮಾನತು ಅವಧಿಯಲ್ಲಿ ಬಂಧಿತ ಪಾಪ್ಯುಲರ್ ಫ್ರಂಟ್ ಅಧ್ಯಕ್ಷನಿಗೆ ಕೆಎಸ್‍ಇಬಿಯಿಂದ 7.84 ಲಕ್ಷ ರೂ. ನಿಯಮ ಮೀರಿ ವೇತನ ನೀಡಿಕೆ
0
ಸೆಪ್ಟೆಂಬರ್ 30, 2022