ಮಲಪ್ಪುರಂ: ನಕಲಿ ಬಿಲ್ ಮತ್ತು ದಾಖಲೆ ಸೃಷ್ಟಿಸಿ 80 ಕೋಟಿ ಇನ್‍ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚಿಸಿದ ಪ್ರಕರಣದ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ.ಮಲಪ್ಪುರಂನ ಕೊಳಂಬ ಪ್ರದೇಶದ ಮಂಜಕ್ಕಾಡ್ ಮನೆಯ ಮೋಹನಕೃಷ್ಣನ್ ಅವರ ಪುತ್ರ ರಾಹುಲ್ (28) ಎಂಬಾತನನ್ನು ಬಂಧಿಸಲಾಗಿದೆ.
ತ್ರಿಶೂರ್ ಜಿಎಸ್‍ಟಿ ಇಲಾಖೆಯ ತನಿಖಾ ಶಾಖೆಯ ಅಧಿಕಾರಿ ಸಿ. ಜ್ಯೋತಿಲಕ್ಷ್ಮಿ ಮತ್ತವರ ತಂಡ ಕಾರ್ಯಾಚರಣೆ ನಡೆಸಿತ್ತು. ಒಣ ಅಡಿಕೆ ನಕಲಿ ದಂಧೆ ನೆಪದಲ್ಲಿ ರಾಹುಲ್ ಮತ್ತವರ ತಂಡ ತೆರಿಗೆ ವಂಚಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಲಕ್ಕಾಡ್ ಮೂಲದ ಬನೀμï ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು. ಬಂಧನದ ನಂತರ ರಾಹುಲ್ ತಲೆಮರೆಸಿಕೊಂಡಿದ್ದ. ಇ-ವೇ ಬಿಲ್ ಮತ್ತು ನಕಲಿ ದಾಖಲೆಗಳನ್ನು ಪಡೆದು ನಕಲಿ ದಾಖಲಾತಿ ಪಡೆದು ತೆರಿಗೆ ವಂಚಿಸುವ ಜಾಲವನ್ನು ಸೃಷ್ಟಿಸಿ ತೆರಿಗೆ ವಂಚನೆಗೆ ಬನೀμï ಗೆ ನೆರವಾಗಿದ್ದ ರಾಹುಲ್. ತಲೆಮರೆಸಿಕೊಂಡಿದ್ದ ಈತನನ್ನು ತ್ರಿಶೂರ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನೆರವಿನೊಂದಿಗೆ ಜಾಮೀನು ರಹಿತ ವಾರಂಟ್ ಮೇಲೆ ಬಂಧಿಸಲಾಯಿತು.
ಒಣ ಅಡಿಕೆ ಹೆಸರಿನಲ್ಲಿ ನಕಲಿ ಬಿಲ್: 80 ಕೋಟಿ ವಂಚಿಸಿದ ತಂಡ: ತ್ರಿಶೂರ್ ನಲ್ಲಿ ಯುವಕನ ಬಂಧನ
0
ಸೆಪ್ಟೆಂಬರ್ 21, 2022
Tags