ಮಂಜೇಶ್ವರ: ಬ್ರಹ್ಮ ಶ್ರೀ ನಾರಾಯಣ ಗುರುಗಳ 168 ನೇ ದಿನಾಚರಣೆಯನ್ನು ವರ್ಕಾಡಿ ಸುಂಕದಕಟ್ಟೆ, ಬೇಕರಿ ಬಳಿಯಿರುವ ಶ್ರೀ ನಾರಾಯಣ ಗುರು ಪ್ರಸಾದಿತ ಯಕ್ಷಗಾನ ಕಲಾರಂಗದಲ್ಲಿ ಆಚರಿಸಲಾಯಿತು.
ಕಲಾರಂಗದ ಸ್ಥಾಪಕ ಅಧ್ಯಕ್ಷ ನಾರಾಯಣ ಪೂಜಾರಿ ಬೆಜ್ಜಂಗಳ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಧರ ನಲ್ಲೆಂಗಿ ಗುರುಪೂಜೆ ನೆರವೇರಿಸಿದರು. ತುಳಸಿನಾರಾಯಣ ಹಾಗೂ ಅರುಣ ಸುಂಕದಕಟ್ಟೆ ಭಜನಾ ಕಾರ್ಯಕ್ರಮದ ನೇತೃತ್ವ ವಹಿಸಿದರು. ಸಂಘದ ಪೋಷಕ ಸದಸ್ಯ ನಾರಾಯಣ ಭಟ್ ಉಜಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಯರಾಮ ಶೆಟ್ಟಿ ತಮನಬೆಟ್ಟು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುರೇಂದ್ರ ಪೂಜಾರಿ ನಲ್ಲೆಂಗಿ, ಹರಿಪ್ರಸಾದ್ ಪೂಂಜ, ವರ್ಕಾಡಿ ಪಂಚಾಯತಿ ಮಾಜಿ ಸದಸ್ಯ ವಸಂತ ಯಸ್ ಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ವಿವರಿಸಿದರು. ಪ್ರವೀಣ್ ಕುಮಾರ್ ಬೆಜ್ಜಂಗಳ, ವಸಂತ್ ಆಚಾರ್ಯ, ದಯಾನಂದ ದೇಕೊಡಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಸಂಘದ ಸದಸ್ಯರು ಹಾಗೂ ಹಿತೈಸಿಗಳು ಉಪಸ್ಥಿತರಿದ್ದರು. ವಿವೇಕಾನಂದ ಶೆಟ್ಟಿ ವರ್ಕಾಡಿ ಸ್ವಾಗತಿಸಿ, ಡಾ. ರಾಜೇಶ್ ಬೆಜ್ಜಂಗಳ ವಂದಿಸಿದರು.
ಸುಂಕದಕಟ್ಟೆಯಲ್ಲಿ ನಾರಾಯಣ ಗುರು ಜಯಂತಿ ಆಚರಣೆ
0
ಸೆಪ್ಟೆಂಬರ್ 12, 2022