ಕೊಚ್ಚಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ.ಕಾಂಗ್ರೆಸ್ ಅಧ್ಯಕ್ಷರಾಗುವುದು ಗುರುತರ ಜವಾಬ್ದಾರಿಯಾಗಿದೆ ಎಂದಿರುವರು.
ಅಧ್ಯಕ್ಷ ಸ್ಥಾನ ಕೇವಲ ಗೌರವದ ಸ್ಥಾನವಲ್ಲ. ಆ ಸ್ಥಾನಕ್ಕೆ ಬರಬೇಕಾದವರು ಆಲೋಚನೆಗಳು ಮತ್ತು ದೂರದೃಷ್ಟಿಯುಳ್ಳ ವ್ಯಕ್ತಿಯಾಗಬೇಕು ಎಂದು ರಾಹುಲ್ ಹೇಳಿದರು.
ತಾನು ಅಧ್ಯಕ್ಷ ಸ್ಥಾನಕ್ಕೆ ವಹಿಸುವೆನೋ ಇಲ್ಲವೋ ಎಂದು ನಿರಂತರವಾಗಿ ಚರ್ಚೆ ನಡೆಯುತ್ತಿದ್ದು, ಎಲ್ಲದರಿಂದ ಗಮನ ಬೇರೆಡೆ ಸೆಳೆಯುವ ಯತ್ನವಾಗಿದೆ. ಆ ಬಲೆಗೆ ಬೀಳಲು ನಾನು ಸಿದ್ಧನಿಲ್ಲ, ತನ್ನ ಹಳೆಯ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಹುಲ್ ಹೇಳಿದರು.
ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಸೇರಿದಂತೆ ರಾಜ್ಯಗಳಲ್ಲಿ ಭಾರತ್ ಜೋಡೋ ಯಾತ್ರೆಯ ಅವಧಿಯನ್ನು ಏಕೆ ಕಡಿಮೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಭಾರತದ ಒಂದು ತುದಿಯಿಂದ ಇನ್ನೊಂದು ತುದಿಗೆ ಪ್ರಯಾಣ ಇದಾಗಿದೆ. ಭಾರತ್ ಜೋಡೋ ಯಾತ್ರೆ ಯಾವ ರಾಜ್ಯಗಳ ಮೂಲಕ ಹಾದುಹೋಗುತ್ತದೆ ಎಂಬುದು ವಿಷಯವಲ್ಲ. ಪ್ರವಾಸದ ಫಲಿತಾಂಶಗಳು ಪ್ರತಿ ರಾಜ್ಯದಲ್ಲಿ ಪ್ರತಿಫಲಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಪಾಪ್ಯುಲರ್ ಫ್ರಂಟ್ ಕೇಂದ್ರಗಳ ಮೇಲಿನ ದಾಳಿ ಕುರಿತು ರಾಹುಲ್ ಪ್ರತಿಕ್ರಿಯಿಸಿದ್ದು, ಯಾವುದೇ ರೀತಿಯ ಕೋಮುವಾದವನ್ನು ಉತ್ತೇಜಿಸುವ ಉದ್ದೇಶವಿಲ್ಲ. ಅಧ್ಯಕ್ಷ ಸ್ಥಾನಕ್ಕೆ ನಾನಿಲ್ಲ ಎಂದು ರಾಹುಲ್ ಪುನರುಚ್ಚರಿಸಿದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಮುಖ್ಯಮಂತ್ರಿ ಸ್ಥಾನದಿಂದ ಕದಲುವುದಿಲ್ಲ ಎಂಬ ಗುಸುಗುಸು ಪಡೆಗಳಲ್ಲಿ ಮೂಡುತ್ತಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಗುರುತರ ಜವಾಬ್ದಾರಿ; ಅಧ್ಯಕ್ಷ ಸ್ಥಾನಕ್ಕೆ ತಾನಿಲ್ಲವೆಂದು ಪುನರುಚ್ಚರಿಸಿದ ರಾಹುಲ್ ಗಾಂಧಿ
0
ಸೆಪ್ಟೆಂಬರ್ 22, 2022