HEALTH TIPS

ಹೆದ್ದಾರಿ ಪ್ರತಿಭಟನಾ ರ್ಯಾಲಿ: ಪೀಪಲ್ಸ್ ಯೂನಿಯನ್ ಆಫ್ ಮಂಜೇಶ್ವರದಿಂದ ಬೆಂಬಲ


             ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ವತಿಯಿಂದ ಸೆಪ್ಟೆಂಬರ್ 10ಕ್ಕೆ ರಾ. ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನಾ ರ್ಯಾಲಿಗೆ ಪೀಪಲ್ಸ್ ಯೂನಿಯನ್ ಆಫ್ ಮಂಜೇಶ್ವರ ಪೂರ್ಣ ಬೆಂಬಲವನ್ನು ಘೋಷಿಸುವುದರ ಜೊತೆಗೆ ಸುಮಾರು ಎರಡು ಸಾವಿರಕ್ಕಿಂತಲೂ ಮಿಕ್ಕ ಜನರನ್ನು ಸೇರಿಸಿ ಪ್ರತಿಭಟನೆಯ ಬಿಸಿಯನ್ನು ರಾಷ್ಟ್ರಮಟ್ಟದಲ್ಲೇ ಗಮನ ಸೆಳೆಯುವಂತೆ ಮಾಡುವುದಾಗಿ ಸಂಘಟನೆಯ ಪದಾಧಿಕಾರಿಗಳು ಕುಂಜತ್ತೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
          ರಾಷ್ಟ್ರೀಯ ಹೆದ್ದಾರಿ 66 ರ ಅಭಿವೃದ್ಧಿ ಕಾಮಗಾರಿ ನಡೆಯುವಾಗ ಎರಡೂ ಬದಿಗಳಲ್ಲಿರುವ ಜನರು ಮೊದಲೇ ಜಮೀನು ಮನೆ ವ್ಯಾಪಾರ ಕಳಕೊಂಡು ಕಂಗಾಲಾಗಿದ್ದಾರೆ. ಪರಿಹಾರದ ಮೊತ್ತದಲ್ಲೂ ತಾರತಮ್ಯ ಅನುಭವಿಸಿದ್ದಾರೆ. ಆದರೂ ನಮ್ಮ ದೇಶದ ಮತ್ತು ರಾಜ್ಯದ ಅಭಿವೃದ್ದಿಗೆ ಬೇಕಾಗಿ ಎಲ್ಲವನ್ನೂ ಸಹಿಸಿ ಸುಮ್ಮನಾಗಿದ್ದಾರೆ. ಇμÉ್ಟಲ್ಲಾ ತ್ಯಾಗವನ್ನು ಸಹಿಸಿದ ನಾಡಿನ ಜನತೆಗೆ ಮತ್ತಷ್ಟು ಸಮಸ್ಯೆಗಳನ್ನು  ಸೃಷ್ಟಿ ಮಾಡುತ್ತಿರುವ ಹೆದ್ದಾರಿ ಪ್ರಾಧಿಕಾರದ ನಡೆ ಖಂಡನೀಯ ಎಂದು ತಿಳಿಸಿದ್ದಾರೆ.
          ಮಂಜೇಶ್ವರದ ಅಭಿವೃದ್ಧಿಗಾಗಿ ಜಾತಿ-ಮತ ರಾಜಕೀಯಗಳನ್ನು ಬದಿಗಿಟ್ಟು ಅನ್ಯಾಯದ ವಿರುದ್ಧ ಹೋರಾಡುವುದೇ ನಮ್ಮ ಗುರಿ  ಎಂದು ಹೇಳಿರುವ ಪದಾಧಿಕಾರಿಗಳು ತಲಪಾಡಿಯಿಂದ ಕರೋಡಾ ವರೆಗಿನ ರಸ್ತೆಯಲ್ಲಿ ಎರಡು ಅಂಡರ್ ಪಾಸ್ ಗಳನ್ನು ನಿರ್ಮಿಸಿಕೊಡಬೇಕು ಎಂಬ ಬೇಡಿಕೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಂದೆ ಇಟ್ಟಿದ್ದರೂ ರಾಜಕೀಯ ನೇತಾರರ ಹಾಗೂ ಗುತ್ತಿಗೆದಾರರ ಜೊತೆ ಹಲವು ಚರ್ಚೆಗಳು ನಡೆಸಿದರೂ ಯಾವುದೇ ಪ್ರಯೋಜನ ಲಭಿಸದೇ ಇರುವ ಹಿನ್ನೆಲೆಯಲ್ಲಿ  ಹೆದ್ದಾರಿ ಪ್ರಾಧಿಕಾರದ ವಿರುದ್ಧ  ಸೆಪ್ಟೆಂಬರ್ 10 ರಂದು  ಶನಿವಾರ ಮಧ್ಯಾಹ್ನ 2.30 ಕ್ಕೆ ತೂಮಿನಾಡಿನಿಂದ ಉದ್ಯಾವರ 10ನೇ ಮೈಲ್ ವರೆಗೆ ಭಾರೀ  ಪ್ರತಿಭಟನಾ ರ್ಯಾಲಿ ನಡೆಯಲಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.
          ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಜಬ್ಬಾರ್ ಪದವು, ಪದಾಧಿಕಾರಿಗಳಾದ ಹಮೀದ್, ಕುಂಞಮೋನು, ಎಂ ಕೆ ಮಜೀದ್ ಹಾಗೂ ಹಸೈನಾರ್ ಉಪಸ್ಥಿತರಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries