ಬದಿಯಡ್ಕ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಲಯ ಕಾಸರಗೋಡು, ಬದಿಯಡ್ಕ ವಲಯದ ನೀರ್ಚಾಲು, ಮಾನ್ಯ, ಕಡಂಬಳ, ಕನ್ಯಪ್ಪಾಡಿ, ಸೀತಾಂಗೋಳಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ಬೇಳ ವಿ.ಎಂ. ಆಡಿಟೋರಿಯಂನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ, ಕೊಡುಗೈ ದಾನಿ ಕೆ.ಎನ್. ಸಾಯಿರಾಂ ಕೃಷ್ಣ ಭಟ್ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಒಕ್ಕೂಟವು ನಿತ್ಯ ನಿರಂತರ ನೂರಾರು ಚಟುವಟಿಕೆಗಳ ಮೂಲಕ ಸಮಾಜದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಮಹಿಳೆಯರನ್ನು ಸಬಲರನ್ನಾಗಿಸಿದೆ. ಮಾತ್ರವಲ್ಲದೆ ಸೇವಾ ಗರಿಮೆಯ ಮೂಲಕ ವಿಶೇಷ ಪದಕ ಪುರಸ್ಕøತರಾದ ಕನ್ನಡಿಗ ಪೊಲೀಸ್ ಅಧಿಕಾರಿಯನ್ನು ಗೌರವಿಸಿದ್ದು ಗುರುತಿಸುವ ಗುಣವನ್ನು ಎತ್ತಿ ಹಿಡಿದಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ನೀರ್ಚಾಲು ಒಕ್ಕೂಟದ ಅಧ್ಯಕ್ಷ ಸವಿತ ಪಿ. ಸಭಾಧ್ಯಕ್ಷತೆ ವಹಿಸಿದ್ದರು. ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಐದು ಒಕ್ಕೂಟಗಳ ಪದಗ್ರಹಣ ನೆರವೇರಿಸಿದರು.
ಬದಿಯಡ್ಕ ಗ್ರಾಮ ಪಂ. ಅಧ್ಯಕ್ಷೆ ಶಾಂತಾ ಬಿ., ಕಾಸರಗೋಡು ಬ್ಲಾಕ್ ಪಂ. ಸದಸ್ಯೆ ಅಶ್ವಿನಿ ಭಟ್, ಸುಕುಮಾರ ಕುದ್ರೆಪ್ಪಾಡಿ, ಬದಿಯಡ್ಕ ಗ್ರಾ.ಪಂ. ಸದಸ್ಯ ಶ್ಯಾಂ ಪ್ರಸಾದ್ ಮಾನ್ಯ, ಹಿರಿಯ ಧಾರ್ಮಿಕ ಮುಖಂಡ ಜಯದೇವ ಖಂಡಿಗೆ, ಜನಜಾಗೃತಿ ವೇದಿಕೆಯ ಪ್ರೊ. ಎ.ಶ್ರೀನಾಥ್ ಮುಂತಾದವರು ಶುಭಾಶಂಸನೆಗೈದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯಿಂದ ಪದಕ ಗಳಿಸಿ ಕನ್ನಡಿಗ ಪೊಲೀಸ್ ಅಧಿಕಾರಿ ಲಕ್ಷ್ಮೀ ನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಸೇವಾ ಪ್ರತಿನಿಧಿಗಳಾದ ನಳಿನಾಕ್ಷಿ, ಸುಮಿತ್ರ, ಅನಿತ ಕುಮಾರಿ, ಶುಭ ರೈ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಮುಖೇಶ್ ಸ್ವಾಗತಿಸಿ, ಬೇಬಿ ವಂದಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದಿಯಡ್ಕ ವಲಯ ಮೇಲ್ವಿಚಾರಕ ದಿನೇಶ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ತಿರುವಾದಿರ ನೃತ್ಯ, ಜಾನಪದ ನೃತ್ಯ, ಸಮೂಹ ಗಾಯನ, ಕಾಮಿಡಿ ಸ್ಕಿಟ್ ಮುಂತಾದವು ಜರಗಿತು. ಕಾರ್ಯಕ್ರಮದಲ್ಲಿ ವೇದಿಕೆಯ ಅಲಂಕಾರ ಸಂಪೂರ್ಣ ಜಾನಪದ ಶೈಲಿಯಲ್ಲಿದ್ದು ಕಣ್ಮನ ಸೆಳೆಯುತ್ತಿತ್ತು.
ಧ.ಗ್ರಾ. ಯೋಜನೆ ಪದಗ್ರಹಣ : ಮುಖ್ಯಮಂತ್ರಿ ಪದಕ ಪಡೆದ ಕನ್ನಡಿಗ ಉತ್ತಮ ಪೊಲೀಸ್ ಅಧಿಕಾರಿಗೆ ಸನ್ಮಾನ, ಸಾಂಸ್ಕøತಿಕ ಸಂಭ್ರಮ
0
ಸೆಪ್ಟೆಂಬರ್ 12, 2022
Tags