ಎರ್ನಾಕುಳಂ: ಅಲ್ಪ ಕಾಲಗಳ ಬಳಿಕ ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆಯಾಗಿದೆ. ಪವನ್ ರೂ.280 ಇಳಿಕೆಯಾಗಿದೆ. ಪ್ರತಿ ಪವನ್ ಚಿನ್ನಕ್ಕೆ 37120 ರೂ.ನಂತೆ ವಹಿವಾಟು ನಡೆಯುತ್ತಿದೆ.
ಇಂದು ಪ್ರತಿ ಗ್ರಾಂಗೆ 35 ರೂಪಾಯಿ ಕಡಿಮೆಯಾಗಿದೆ. ಇದರೊಂದಿಗೆ ಒಂದು ಗ್ರಾಂ ಚಿನ್ನದ ಬೆಲೆ 4640 ಆಗಿದೆ. ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಇದಾದ ಬಳಿಕ ಮತ್ತೆ ಬೆಲೆ ಇಳಿಕೆಯಾಗಿದೆ.
ಸೆಪ್ಟೆಂಬರ್ ಮೊದಲ ವಾರದಿಂದ ರಾಜ್ಯದಲ್ಲಿ ಚಿನ್ನದ ಬೆಲೆ ಕುಸಿಯಲಾರಂಭಿಸಿತ್ತು. ಆದರೆ ಓಣ ದಿನಗಳಲ್ಲಿ ಚಿನ್ನದ ಬೆಲೆ 37,400 ರೂ.ಬೆಲೆ ಇತ್ತು. ಇದಾದ ಬಳಿಕ ಮತ್ತೆ ಚಿನ್ನದ ಬೆಲೆ ಇಳಿಕೆ ಕಂಡಿದೆ.
ಇದೇ ವೇಳೆ, ರಾಜ್ಯದಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 62 ರೂ. ಇದೆ.
ಓಣಂ ಮುಗಿಯಿತು; ಚಿನ್ನದ ಬೆಲೆಯಲ್ಲೂ ಇಳಿಕೆ: ಚಿನ್ನ ಖರೀದಿಸಲು ಸುವರ್ಣಾವಕಾಶ: ವಿರಾಮದ ಬಳಿಕ ಚಿನ್ನದ ಬೆಲೆ ಮತ್ತೆ ಕುಸಿತ
0
ಸೆಪ್ಟೆಂಬರ್ 14, 2022