ಬದಿಯಡ್ಕ: ಬ್ಯಾಂಕ್ ಆಫ್ ಬರೋಡ ಕಸ್ಟಮರ್ ಸರ್ವೀಸ್ ಸೆಂಟರ್ ಹಾಗೂ ಶ್ರೀಶೈಲಂ ಜನ ಸಹಾಯ ಕೇಂದ್ರವನ್ನು ಮಾವಿನಕಟ್ಟೆಯ ದ್ವಾರಕ ನಗರದಲ್ಲಿ ಉದ್ಘಾಟಿಸಲಾಗಿದೆ.
ಬ್ಯಾಂಕ್ ಆಫ್ ಬರೋಡದ ಬದಿಯಡ್ಕ ಶಾಖಾ ಪ್ರಬಂಧಕ ಬಾಲು ಬಿ.ಆರ್. ಉದ್ಘಾಟಿಸಿದರು. ಜನ ಸಹಾಯ ಕೇಂದ್ರವನ್ನು ಬದಿಯಡ್ಕ ಠಾಣಾಧಿಕಾರಿ ವಿನೋದ್ ಕುಮಾರ್ ಉದ್ಘಾಟಿಸಿದರು. ಖಂಡಿಗೆ ರಾಧಾಕೃಷ್ಣ ಭಟ್, ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದ ರಘರಾಮ ನಾಲ್ ತ್ತಿಯರ್, ಕುಂಬ್ಡಾಜೆ ಗ್ರಾ.ಪಂ.ಸದಸ್ಯೆ ಮೀನಾಕ್ಷಿ, ಶಶಿಧರ್, ಬಿಜೆಪಿ ಬದಿಯಡ್ಕ ಮಂಡಲಾಧ್ಯಕ್ಷ ಹರೀಶ್ ನಾರಂಪಾಡಿ, ಬಾಲರಾಜ್ ಕುಣಿಕುಳ್ಳಾಯ, ಧ.ಗ್ರಾ.ಯೋಜನೆಯ ಬದಿಯಡ್ಕ ವಲಯ ಮೇಲ್ವಿಚಾರಕ ದಿನೇಶ್ ಕೊಕ್ಕಡ, ಚಿರಿಕಂಡನ್, ಕೃಷ್ಣರಾಜ, ಮನು ಪಣಿಕ್ಕರ್, ಶೀಜಾ ಎಂ, ಜಯಶ್ರೀ ಮೊದಲಾದವರು ಭಾಗವಹಿಸಿದ್ದರು.
ಮಾವಿನಕಟ್ಟೆಯಲ್ಲಿ ಬ್ಯಾಂಕ್ ಆಫ್ ಬರೋಡ ಕಸ್ಟಮರ್ ಸರ್ವೀಸ್ ಸೆಂಟರ್ ಉದ್ಘಾಟನೆ
0
ಸೆಪ್ಟೆಂಬರ್ 04, 2022
Tags