ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಎರಡನೇ ವರ್ಷದ ಆರಾಧನಾ ಮಹೋತ್ಸವ ಬುಧವಾರ ಶ್ರೀಮಠದಲ್ಲಿ ಜರುಗಿತು. ಬೆಳಗ್ಗೆ 7ಕ್ಕೆ ಪೂಜೆ, ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಬಗ್ಗೆ ರಚಿಸಲಾದ ಕವನಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಆನೂರು ಅನಂತಕೃಷ್ಣ ಶರ್ಮ ಸಂಗೀತ ಸಂಯೋಜಿಸಿ ರಚಿಸಲಾದ'ಗುರು ಗೀತ ಲಹರಿ'ಧ್ವನಿಚಕ್ರ ಬಿಡುಗಡೆ ನಡೆಯಿತು.
ಈ ಸಂದರ್ಭ ದ್ವಂದ್ವ ವಯಲಿನ್ ವಾದನ ಕಾರ್ಯಕ್ರಮದಲ್ಲಿ ವಿದ್ವಾನ್ ವಿಠಲ್ ರಾಮಮೂರ್ತಿ ಚೆನ್ನೈ ಮತ್ತು ವಿದ್ವಾನ್ ವಿ.ವಿ.ಎಸ್ ಮುರಾರಿ ಚೆನ್ನೈ ಅವರಿಂದ ವಯಲಿನ್ ವಾದನ ನಡೆಯಿತು. ಮೃದಂಗದಲ್ಲಿ ವಿದ್ವಾನ್ ಶ್ರೀಮುಷ್ಣಂ ರಾಜಾರಾಮ್ ಚೆನ್ನೈ, ಘಟಂನಲ್ಲಿ ವಿದ್ವಾನ್ ಜಿ.ಎಸ್ ರಾಜಾರಾಮ್ ಮೈಸೂರ್, ಮೋರ್ಸಿಂಗ್‍ನಲ್ಲಿ ಗೋವಿಂದಪ್ರಸಾದ್ ಪಯ್ಯನ್ನೂರ್ ಸಹಕರಿಸಿದರು. ಈ ಸಂದರ್ಭ ನಡೆದ ವೃಂದಾವನ ಪೂಜಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ವೃಂದಾವನ ಪೂಜೆ ನೆರವೇರಿಸಿದರು.