ಕೊಚ್ಚಿ: ಕಾಟ್ಟಾಕ್ಕಡ ಕೆಎಸ್‍ಆರ್‍ಟಿಸಿ ಡಿಪೆÇೀ ನೌಕರರು ತಂದೆ ಮತ್ತು ಮಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಆಘಾತಕಾರಿಯಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಹಲ್ಲೆಗೊಳಗಾದ ತಂದೆ ಮತ್ತು ಮಗಳನ್ನು ಭೇಟಿ ಮಾಡಿ ವರದಿ ಸಲ್ಲಿಸುವಂತೆ ಕೆಎಸ್‍ಆರ್‍ಟಿಸಿಗೆ ಹೈಕೋರ್ಟ್ ಸೂಚಿಸಿದೆ.
ದಾಳಿ ನಡೆದ ದಿನವೇ ಈ ವಿಚಾರದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಿತ್ತು. ಘಟನೆ ಕುರಿತು ವರದಿ ಸಲ್ಲಿಸುವಂತೆ ಕೆಎಸ್‍ಆರ್‍ಟಿಸಿ ಎಂಡಿಗೆ ನ್ಯಾಯಾಲಯ ಸೂಚಿಸಿತ್ತು. ಈ ವರದಿ ಬಂದ ನಂತರ ಖುದ್ದು ಸಂತ್ರಸ್ತರನ್ನು ಭೇಟಿ ಮಾಡಿ ವಿವರ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ನ್ಯಾಯಾಲಯವು ಇಂದು(ಶುಕ್ರವಾರ) ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದೆ.
ಮೊನ್ನೆ ಪ್ರಯಾಣ ಮಾಹಿತಿ ತಿಳಿಯಲು ತೆರಳಿದ್ದ ತಂದೆ ಮತ್ತು ಮಗಳ ಪೈಕಿ ತಂದೆಯ ಎದುರೇ ಮಗಳನ್ನು ಸಿಬ್ಬಂದಿಯೋರ್ವ ಥಳಿಸಿದ್ದಾರೆ. ಆರೋಪಿಗಳ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಘಟನೆ ನಡೆದ ಮೊದಲ ದಿನದಿಂದಲೂ ಪೋಲೀಸರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಆಂಟನಿ ರಾಜು ಭರವಸೆ ನೀಡಿದ್ದಾರೆ. ಆದರೆ ಥಳಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ಎಫ್‍ಐಆರ್‍ನಲ್ಲಿ ಮಾಹಿತಿ ದಾಖಲಾಗಿಲ್ಲ.
ತಂದೆ ಎದುರೇ ಮಗಳಿಗೆ ಥಳಿಸಿದ ಘಟನೆ: ಗಾಯಗೊಂಡವರನ್ನು ಭೇಟಿಯಾಗಿ ವರದಿ ಮಾಡಲು ಹೈಕೋರ್ಟ್ ಸೂಚನೆ
0
ಸೆಪ್ಟೆಂಬರ್ 22, 2022