ಕಾಸರಗೋಡು: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯು ಕಾಲ್ ಸೆಂಟರ್ ಸಹಾಯಕ ಹುದ್ದೆಯ ತಾತ್ಕಾಲಿಕ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾದೆ. ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಎಂಎಸ್‍ಡಬ್ಲು-ಎಲ್‍ಎಲ್‍ಬಿ ಪದವೀಧರರಿಗೆ ಆದ್ಯತೆ ನೀಡಲಾಗುವುದು. ವಯೋಮಿತಿ 21 ರಿಂದ 35 ವರ್ಷಗಳಾಗಿದ್ದು, ನೇಮಕಾತಿಯು ಸಂದರ್ಶನವನ್ನು ಆಧರಿಸಿ ನಡೆಯಲಿದೆ.
ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ, ತಿರುವನಂತಪುರಂ, ವೆಲ್ಲಯಂಬಲಂ, ಅಯ್ಯಂಕಾಳಿ ಭವನದ ಕಾಲ್ ಸೆಂಟರ್‍ಗಳಲ್ಲಿ ನೇಮಕಾತಿ ನಡೆಯಲಿದೆ. ಮಾಸಿಕ ಗೌರವಧನವಾಗಿ ರೂ.18,000 ನೀಡಲಾಗುವುದು. ನೇಮಕಾತಿ ಕಾಲಾವಧಿ 2 ವರ್ಷಗಳಾಗಿದೆ. ಜಾತಿ, ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳ ಪ್ರತಿಗಳೊಂದಿಗೆ ಅರ್ಜಿಯನ್ನು ತಿರುವನಂತಪುರಂ, ಪಾಳಯಂ, ನಂದವನದಲ್ಲಿರುವ ಪರಿಶಿಷ್ಟ ಜಾತಿ ಅಭಿವೃದ್ಧಿ ನಿರ್ದೇಶನಾಲಯದಲ್ಲಿ ಸೆ. 30ರ ಒಳಗಾಗಿ ಸಲ್ಲಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(04994 256162)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕಾಲ್ ಸೆಂಟರ್ ಸಹಾಯಕರ ನೇಮಕಾತಿಗೆ ಅರ್ಜಿ ಆಹ್ವಾನ
0
ಸೆಪ್ಟೆಂಬರ್ 27, 2022