ಕಾಸರಗೋಡು: ಗಡಿನಾಡಿನ ನಾನಾ ಸಂಘಟನೆಗಳು ನಡೆಸುತ್ತಿರುವ ಕನ್ನಡದ ವಿವಿಧ ಕಾರ್ಯಕ್ರಮಗಳಿಂದ ಇಲ್ಲಿ ಭಾಷೆ ಮತ್ತು ಸಾಹಿತ್ಯದ ಉದ್ದೀಪನಕ್ಕೆ ಸಹಕಾರಿಯಾಗಿರುವುದಾಗಿ ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ತಿಳಿಸಿದ್ದಾರೆ. ಅವರು ಕಾಸರಗೋಡು ಪಾರೆಕಟ್ಟದ ಕನ್ನಡಗ್ರಾಮದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಉಡುಪಿ ಜಿಲ್ಲಾ ಚುಟುಕು ಸಹಿತ್ಯ ಪರಿಷತ್ ಸಹಯೋಗದೊಂದಿಗೆ ನಡೆದ ಕಾಸರಗೋಡು ಜಿಲ್ಲಾ 6ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು.
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಸರ್ವ ಸಮ್ಮೇಳನಾಧ್ಯಕ್ಷ ಚುಟುಕು ಕವಿ, ವ್ಯಂಗ್ಯ ಚಿತ್ರಕಾರ ವೆಂಕಟ ಭಟ್ ಎಡನೀರು, ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕಿ ಡಾ. ಪ್ರಮಿಳಾ ಮಾಧವ್, ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ, ಉಡುಪಮೂಲೆ ಭೂಮಿಕಾ ಪ್ರತಿಷ್ಠಾನ ಅಧ್ಯಕ್ಷೆ, ವಿದುಷಿ ಅನುಪಮಾ ರಾಘವೇಂದ್ರ, ಜಯಾನಂದ ಕುಮಾರ್ ಹೊಸದುರ್ಗ, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಎಂ.ಜಿ.ಆರ್. ಅರಸ್, ಹರೀಶ್ ಸುಲಾಯ ಒಡ್ಡಂಬೆಟ್ಟು, ಕಾ.ವೀ. ಕೃಷ್ಣದಾಸ್, ರಾಧಾಕೃಷ್ಣ ಉಳಿಯತ್ತಡ್ಕ, ಪ್ರೊ. ಎ.ಶ್ರೀನಾಥ್ ಮುಂತಾದವರು ಉಪಸ್ಥಿತರಿದ್ದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯಸಿಂಚನ, ಸಾಹಿತ್ಯ-ಸಾಂಸ್ಕøತಿಕ ಸಂಭ್ರಮ, ಸಾಂಸ್ಕøತಿಕ ವೈವಿದ್ಯ ಜರುಗಿತು.
ಕಾಸರಗೋಡು ಜಿಲ್ಲಾ ಆರನೇ ಚುಟುಕು ಸಾಹಿತ್ಯ ಸಮ್ಮೇಳನ ಸಮಾರೋಪ
0
ಸೆಪ್ಟೆಂಬರ್ 14, 2022