ನಿಮಗೆ ಹೊಟ್ಟೆ ಉಬ್ಬಿದ ಅನುಭವ ಆಗಿದ್ಯಾ?. ಹೊಟ್ಟೆ ತುಂಬಿಲ್ಲದಿದ್ದರು ಹೊಟ್ಟೆ ಉಬ್ಬಿದಂತೆ ನಿಮಗೆ ಭಾಸವಾಗಿದ್ಯಾ? ಹಾಗಾದರೆ ಇದು ಹೊಟ್ಟೆಯ ಪೂರ್ಣತೆಯ ಸಂವೇದನೆಯಾಗಿದೆ. ಇದನ್ನು ಸುಲಭವಾಗಿ ವಿವರಿಸುವುದಾದರೆ ಹೊಟ್ಟೆಯಲ್ಲಿ ಗಾಳಿ ತುಂಬಿದ ಬಲೂನ್ ರೀತಿಯ ಭಾವನೆಯನ್ನು ಉಬ್ಬುವುದು ಎಂದು ಕರೆಯಬಹುದು.
ಇದು ಸಾಮಾನ್ಯವಾಗಿ ಜಠರಗರುಳಿನ ಪ್ರದೇಶದಲ್ಲಿ ಅನಿಲದ ಶೇಖರಣೆಯ ಪರಿಣಾಮವಾಗಿ ಸಂಭವಿಸುತ್ತದೆ ಮತ್ತು ಜಠರಗರುಳಿನ ಅಸ್ವಸ್ಥತೆಗಳು ಅಥವಾ ಸಾವಯವ ಕಾಯಿಲೆಗಳೊಂದಿಗೆ ಸಂಬಂಧ ಇದು ಹೊಂದಿರಬಹುದು. ಸುಮಾರು 16-30% ಜನರು ಈ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.
ಇದು ಸಾಮಾನ್ಯವಾಗಿ ಜಠರಗರುಳಿನ ಪ್ರದೇಶದಲ್ಲಿ ಅನಿಲದ ಶೇಖರಣೆಯ ಪರಿಣಾಮವಾಗಿ ಸಂಭವಿಸುತ್ತದೆ ಮತ್ತು ಜಠರಗರುಳಿನ ಅಸ್ವಸ್ಥತೆಗಳು ಅಥವಾ ಸಾವಯವ ಕಾಯಿಲೆಗಳೊಂದಿಗೆ ಸಂಬಂಧ ಇದು ಹೊಂದಿರಬಹುದು. ಸುಮಾರು 16-30% ಜನರು ಈ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.
ಹೊಟ್ಟೆ ಉಬ್ಬುವುದಕ್ಕೆ ಕಾರಣವೇನು?
ಉಬ್ಬುವಿಕೆಗೆ ಹಲವು ಕಾರಣಗಳಿವೆ. ಅಸಿಡಿಟಿ, ಅಜೀರ್ಣ ಸಮಸ್ಯೆ, ಉದರ ಮತ್ತು ಕರುಳಿನ
ಕಾಯಿಲೆಗಳು. ಅಲ್ಲದೇ ಕೆಲ ಆಹಾರದಿಂದ ಮಲಬದ್ಧತೆ ಹಾಗೂ ಅಜೀರ್ಣ ಸಮಸ್ಯೆಯೂ ಇರಬಹುದು.
ಅಂದರೆ ಸಾಮಾನ್ಯವಾಗಿ ಹಾಲು (ಲ್ಯಾಕ್ಟೋಸ್ ಇಂಟ್ ಲಾರೆನ್ಸ್ ), ಫ್ರಕ್ಟೋಸ್
ಇಂಟಲಾರೆನ್ಸ್, ಗೋಧಿ ಮತ್ತು ಅಂಟುಗೆ ಆಹಾರ ಇಂಟಲಾರೆನ್ಸ್ ಮಲಬದ್ದತೆ ಮತ್ತು
ಜೀರ್ಣಕ್ರಿಯೆ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಇದರಿಂದ ಮಲ ಹೊರಗೆ ಹೋಗದೆ ಗ್ಯಾಸ್
ರೂಪದಲ್ಲಿ ಹೊಟ್ಟೆ ಉಬ್ಬುವಿಕೆಗೆ ಕಾರಣವಾಗಬಹುದು. ಇನ್ನು ಹಾರ್ಮೋನುಗಳು, ವಿಶೇಷವಾಗಿ
ಅವಧಿಯ ಮೊದಲು ಅಥವಾ ಋತುಬಂಧ ಸಮಯದಲ್ಲಿನ ಚಟುವಟಿಕೆಗಳಿಂದ ಹೊಟ್ಟೆ ಉಬ್ಬುತ್ತದೆ.
ಹೊಟ್ಟೆ ಉಬ್ಬರದ ಲಕ್ಷಣವೇನು?
ಹೊಟ್ಟೆ ಉಬ್ಬರವನ್ನು ಸಾಮಾನ್ಯವಾಗಿ ಹೇಳಬೇಕೆಂದರೆ ಗ್ಯಾಸ್ ಎನ್ನಬಹುದು. ಹೊಟ್ಟೆಯಲ್ಲಿ
ಗ್ಯಾಸ್ ತುಂಬುವುದು ಆಗಿದೆ. ಇದರ ಲಕ್ಷಣವನ್ನು ಗಮನಿಸುವುದಾದರೆ ಹೊಟ್ಟೆ ತುಂಬಿದಂತೆ
ಅನುಭವವಾಗುವುದು ಇದರ ಪ್ರಮುಖ ಲಕ್ಷಣವಾಗಿದೆ.
ಅಲ್ಲದೇ ಹೊಟ್ಟೆಯು ತೀಕ್ಷ್ಣವಾದ ನೋವಿನಿಂದ ತುಂಬಿದೆ ಎಂಬ ಸಂವೇದನೆಯು ದೇಹದಲ್ಲಿ
ಎಲ್ಲಿಯಾದರೂ ಸಂಭವಿಸಬಹುದು. ಅಲ್ಲದೇ ಈ ನೋವು ಒಂದು ಕಡೆಯಿಂದ ಮತ್ತೊಂದು ಕಡೆಯಲ್ಲೂ
ಕಾಣಿಸಿಕೊಳ್ಳಬಹುದು. ಇನ್ನು ಹೊಟ್ಟೆ ಉಬ್ಬರದ ಜೊತೆ ಅತಿಸಾರ, ರಕ್ತಸಿಕ್ತ ಮಲ, ಎದೆಯ
ಅಸ್ವಸ್ಥತೆ, ಹಸಿವಿನ ಕೊರತೆ ಅಥವಾ ತುಂಬಾ ಬೇಗನೆ ತುಂಬಿದ ಭಾವನೆ ಆಗುವುದಿದ್ದರೆ ಕೂಡಲೇ
ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಚಿಕಿತ್ಸೆ!
ಆಹಾರ ಸೇವಿಸುತ್ತಿದ್ದಂತೆ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾಗುತ್ತದೆ. ತಿಂದ ತಕ್ಷಣವೇ
ಹೊಟ್ಟೆ ನೋವು ಅಥವಾ ಹೊಟ್ಟೆ ಉಬ್ಬರಿಸಿದ ಅನುಭವವಾಗುತ್ತಿರುತ್ತದೆ. ಮುಖ್ಯವಾಗಿ ಉದ್ದಿನ
ದೋಸೆ/ಇಡ್ಲಿ ಹಾಗೂ ಆಲೂಗಡ್ಡೆ ಪದಾರ್ಥಗಳ ಸೇವನೆ ವೇಳೆ ಈ ಸಮಸ್ಯೆ ಕಾಡುತ್ತಿರುತ್ತವೆ.
ಇಂತಹ ಸಮಸ್ಯೆ ನಿಮಗೆ ಕಾಡುತ್ತಿದ್ದರೆ ನಿಮ್ಮ ಆಹಾರ ಪದ್ದತಿಯನ್ನು ಬದಲಾಯಿಸುವುದು
ಒಳ್ಳೆಯದು.
ಅಂತಹ ಆಹಾರಗಳಿಂದ ದೂರ ಇದ್ದು ಸಾತ್ವಿಕ ಆಹಾರದ ಮೊರೆ ಹೋದರೆ ತನ್ನಿಂತಾನೇ ಹೊಟ್ಟೆ
ಉಬ್ಬರದ ಸಮಸ್ಯೆ ದೂರವಾಗುತ್ತದೆ. ಮುಖ್ಯವಾಗಿ ಆಹಾರದಲ್ಲಿ ಬದಲಾವಣೆ ತಂದರೆ ಉಬ್ಬುವಿಕೆ
ಸಮಸ್ಯೆ ದೂರವಾಗುತ್ತದೆ.
ಇನ್ನು ಮಲಬದ್ಧತೆಯಿಂದ ಉಬ್ಬುವಿಕೆ ಉಂಟಾಗುತ್ತಿದ್ದರೆ. ನೀವು ಹೆಚ್ಚು ಫೈಬರ್
ಆಹಾರಗಳನ್ನು ತಿನ್ನುವುದು ಒಳ್ಳೆಯದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ದ್ರವ
ಆಹಾರ ಅಂದರೆ ಜ್ಯೂಸ್, ನೀರು ಸೇವನೆಯನ್ನು ಹೆಚ್ಚಿಸುವ ಮೂಲಕ ಹೊಟ್ಟೆ ಉಬ್ಬರದ
ಸಮಸ್ಯೆಯನ್ನು ದೂರ ಇಡಬಹುದು.
ಇನ್ನು ಆಂಟಾಸಿಡ್ಗಳು ಸೇವನೆಯಿಂದ ಹೊಟ್ಟೆಯಲ್ಲಿರುವ ಅನಿಲ ಶೇಖರಣೆಯನ್ನು ಸುಲಭವಾಗಿ
ಹೊರಹಾಕಲು ಸಹಾಯ ಮಾಡುತ್ತದೆ. ನಿಯಮಿತ ವ್ಯಾಯಾಮ ಮತ್ತು ಯೋಗ ಕೂಡ ಹೊಟ್ಟೆ ಉಬ್ಬರವನ್ನು
ಕಡಿಮೆ ಮಾಡುತ್ತದೆ.
ಮನೆ ಮದ್ದು
ಆಹಾರ ಸೇವಿಸಿದೊಡನೆ ಕಂಡು ಬರುವ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆಗಳ ಮೊರೆ ಹೋಗಬೇಡಿ.
ಬದಲಾಗಿ ಪುದೀನಾ ಎಲೆಗಳ ಚಹಾ ಸೇವಿಸಿ. ಪ್ರತಿದಿನ ಆಹಾರ ಸೇವಿಸಿದ ನಂತರ ಏಲಕ್ಕಿ
ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಅದನ್ನು ಬಾಯಿಯಲ್ಲಿ ಇಟ್ಟುಕೊಂಡು ಮಿಠಾಯಿಯಂತೆ
ಅಗಿಯಿರಿ.
ಈ ಕಾರಣದಿಂದಾಗಿ, ನಿಮ್ಮ ಹೊಟ್ಟೆಯ ಸಮಸ್ಯೆಗೆ ವಿಶ್ರಾಂತಿ ಸಿಗುತ್ತದೆ ಮತ್ತು
ಉಬ್ಬುವಿಕೆಯ ಸಮಸ್ಯೆಯನ್ನು ಇದದು ನಿಯಂತ್ರಿಸುತ್ತದೆ. ಆಹಾರ ತಿಂದ ನಂತರ ಕಪ್ಪು
ಉಪ್ಪಿನೊಂದಿಗೆ 4 ರಿಂದ 5 ಪುದೀನಾ ಎಲೆಗಳನ್ನು ಅಗಿಯಿರಿ. ಇದರ ನಂತರ ಒಂದು ಅಥವಾ ಎರಡು
ಸಿಪ್ಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದರಿಂದ ಹೊಟ್ಟೆಯುಬ್ಬರ ಸಮಸ್ಯೆಗೂ
ಸಾಕಷ್ಟು ಪರಿಹಾರ ಸಿಗುತ್ತದೆ.