ಕಾಸರಗೋಡು: ನೀಲೇಶ್ವರ ನಗರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತಾ ಸಂದೇಶ ರ್ಯಾಲಿ ಮತ್ತು ಕರಾವಳಿ ಶುಚೀಕರಣ ನಡೆಸಲಾಯಿತು. ತ್ಯಾಜ್ಯ ಮುಕ್ತ ನಗರಗಳನ್ನು ನಿರ್ಮಿಸಲು ಭಾರತೀಯ ಸ್ವಚ್ಛತಾ ಲೀಗ್ ಅಂಗವಾಗಿ ಶುಚೀಕರಣ ಕಾರ್ಯ ನಡೆಸಲಾಯಿತು.
ಅಯಿತ್ತಲ ಬಸ್ ನಿರೀಕ್ಷಣಾ ಕೇಂದ್ರದ ಬಳಿ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ ಧ್ವಜಾರೋಹಣ ನೆರವೇರಿಸಿದ ನಂತರ ಅಯಿತ್ತಲ ಸಮುದ್ರ ಕರಾವಳಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ನಗರಸಭೆ ಉಪಾಧ್ಯಕ್ಷ ಪಿ.ಪಿ.ಮಹಮ್ಮದ್ ರಫಿ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಪೆÇಲೀಸ್ ಠಾಣೆ ಎಸ್.ಐ.ಟಿ.ವಿ.ಚಂದ್ರನ್, ಕೊಟ್ಟಾಪುರಂ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ಬಿ.ನಿಶಾ, ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯ ಎನ್.ಎಸ್.ಎಸ್ ಕಾರ್ಯಕ್ರಮ ನಿರ್ವಹಣಾಧಿಕಾರಿ ಎನ್.ಎಸ್. ವೀಣಾ, ಸ್ವಚ್ಛ ಅಮೃತ ಮಹೋತ್ಸವಂ ನಗರಸಭೆ ಸಂಯೋಜಕ ಕೆ.ಪ್ರವೀಣ್ ಕುಮಾರ್, ಎಸ್‍ಎಎಫ್ ಜಿಲ್ಲಾ ಸಂಯೋಜಕ ಲಿಬಿನ್ ವಿನೋದ್, ನವಕೇರಳ ಮಿಷನ್ ಆರ್. ಪಿ ದೇವರಾಜನ್, ಶುಚಿತ್ವ ಮಿಷನ್ ಆರ್ ಪಿ ರಂಜಿನಿ, ಎನ್ ಎಸ್ ಎಸ್ ಸ್ವಯಂಸೇವಕರಾದ ಅನುಗ್ರಹ ಜಿ ನಾಯರ್ ಮತ್ತು ಶೆರಿನ್ ಫಾತಿಮಾ ಉಪಸ್ಥಿತರಿದ್ದರು. ನಗರಸಭಾ ಸದಸ್ಯರಾದ ಎಂ.ಕೆ.ವಿನಯರಾಜ್, ಕೆ.ಮೋಹನನ್, ಸಿವಿಲ್ ಪೆÇಲೀಸ್ ಅಧಿಕಾರಿಗಳಾದ ಪಿ.ಸುರೇಂದ್ರನ್, ಎನ್.ವಿ. ರಂಜಿತ್ ಕುಮಾರ್, ಟಿ.ವಿಪ್ರಮೋದ್, ವಿ. ಕೆ.ರತೀಶ್, ಕೊತ್ತಾಪುರದ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕರು, ಸಿಬ್ಬಂದಿ, ಮೀನುಗಾರಿಕೆ ಇಲಾಖೆಸಿಬ್ಬಂದಿ ನೇತೃತ್ವ ವಹಿಸಿದ್ದರು. ಕುಟುಂಬಶ್ರೀ ಕಾರ್ಯಕರ್ತರು, ಹಸಿರು ಕ್ರಿಯಾಸೇನೆ ಸದಸ್ಯರು, ಪುರಸಭೆ ಶುಚಿತ್ವ ವಿಭಾಗದ ಸಿಬ್ಬಂದಿ ಹಾಗೂ ಎನ್‍ಎಸ್‍ಎಸ್ ಸ್ವಯಂಸೇವಕರು ಭಾಗವಹಿಸಿದ್ದರು. ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ನೀಲೇಶ್ವರ ನಗರವನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ನೀಲೇಶ್ವರದಲ್ಲಿ ಸ್ವಚ್ಛತಾ ಸಂದೇಶ ರ್ಯಾಲಿ, ಕರಾವಳಿ ಶುಚೀಕರಣ
0
ಸೆಪ್ಟೆಂಬರ್ 19, 2022
Tags