ತಿರುವನಂತಪುರ: ಕೇರಳದ ರಸ್ತೆಗಳ ದುಸ್ಥಿತಿಗೆ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಪ್ರತಿಕ್ರಿಯಿಸಿದ್ದಾರೆ. ನಾಲ್ಕು ವರ್ಷಗಳಲ್ಲಿ ಕೇರಳದ ಎಲ್ಲಾ ರಸ್ತೆಗಳನ್ನು ಬಿಎಂ ಮತ್ತು ಬಿಸಿ ಗುಣಮಟ್ಟಕ್ಕೆ ತರಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಬೆಲೆ ಹೆಚ್ಚಾದರೆ ಗುಣಮಟ್ಟ ಹೆಚ್ಚುತ್ತದೆ ಎಂದು ಪ್ರತಿಕ್ರಿಯಿಸಿದ ಸಚಿವರು, ರಸ್ತೆಗಳ ಗುಣಮಟ್ಟವನ್ನು ಜನರೆಲ್ಲರೂ ಅರಿತುಕೊಳ್ಳುತ್ತಿದ್ದಾರೆ ಎಂದಿರುವರು.
ಜನರಿಗೆ ರಸ್ತೆಗಳ ಬಗ್ಗೆ ಅರಿವಿರುವುದರಿಂದ ಸಣ್ಣ ವಿಷಯಗಳೂ ದೊಡ್ಡ ಸುದ್ದಿಯಾಗುತ್ತವೆ. ಇಂತಹ ಸುದ್ದಿಗಳಿಗೆ ಇಲಾಖೆ ಪೆÇ್ರೀತ್ಸಾಹ ನೀಡುತ್ತದೆ ಎಂದು ಕೆ.ಎನ್.ಬಾಲಗೋಪಾಲ್ ಹೇಳಿದರು. ರಸ್ತೆ ಮಾಡಲು ಬಳಸಿದ ವಸ್ತುಗಳನ್ನು ಮರುಬಳಕೆ ಮಾಡುವುದು ಹೇಗೆ ಎಂಬುದನ್ನು ನಾವು ಕಲಿಯಬೇಕು ಎಂದು ಸಚಿವರು ಹೇಳಿದರು.
ರಸ್ತೆಯ ಜೀವಿತಾವಧಿಯನ್ನು ವಿಸ್ತರಿಸಲು ತಂತ್ರಜ್ಞಾನಗಳನ್ನು ಬಳಸಬೇಕು. ರಬ್ಬರೀಕೃತ ರಸ್ತೆಗಳನ್ನು ಹೆಚ್ಚೆಚ್ಚು ಬಳಸಿದರೆ ಉತ್ತಮ. ಈ ಮೂಲಕ ಕೇರಳದ ಆರ್ಥಿಕ ಸ್ಥಿತಿಯೇ ಬೆಳೆಯಲಿದೆ. ಕೇರಳದಲ್ಲಿ ರಸ್ತೆ ಕುಸಿತಕ್ಕೆ ಚರಂಡಿಗಳ ಕೊರತೆಯೇ ಪ್ರಮುಖ ಕಾರಣ ಎಂದು ಸಚಿವರು ಹೇಳಿದ್ದಾರೆ.
ಜನರು ರಸ್ತೆಗಳ ಗುಣಮಟ್ಟವನ್ನು ಗುರುತಿಸುತ್ತಾರೆ: ಚರಂಡಿಗಳಿಲ್ಲದಿರುವುದೇ ರಸ್ತೆ ದುರವಸ್ಥೆಗೆ ಕಾರಣ: ಸಚಿವ ಕೆ.ಎನ್.ಬಾಲಗೋಪಾಲ್
0
ಸೆಪ್ಟೆಂಬರ್ 14, 2022
Tags