ಕಾಸರಗೋಡು: ಓಣಂ ಸಂದರ್ಭ ಸಾರ್ವಜನಿಕ ಮಾರುಕಟ್ಟೆಯಲ್ಲಿ ಪಡಿತರ ಸರಕುಗಳ ಕಾಳಸಂತೆ, ಕಾಳಧನ, ಅಧಿಕ ಶುಲ್ಕ ವಸೂಲಿ ಮತ್ತು ಮರುಮಾರಾಟವನ್ನು ಪರಿಶೀಲಿಸಲು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ಜಿಲ್ಲೆಯ ಸಾರ್ವಜನಿಕ ಮಾರುಕಟ್ಟೆ ಹಾಗೂ ಪಡಿತರ ಅಂಗಡಿಗಳಲ್ಲಿ ಜಿಲ್ಲಾ ಸರಬರಾಜು ಅಧಿಕಾರಿ ಎನ್.ಜೆ.ಶಾಜಿಮೋನ್ ನೇತೃತ್ವದಲ್ಲಿ ತಪಾಸಣಾ ಕಾರ್ಯ ನಡೆಯುತ್ತಿದೆ. ಒಂಬತ್ತು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಎರಡರಲ್ಲಿ ಅಕ್ರಮಗಳು ಪತ್ತೆ ಹಚ್ಚಿ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕಾಸರಗೋಡು ತಾಲೂಕು ಪೂರೈಕೆ ಅಧಿಕಾರಿ ಕೆ.ವಿ.ದಿನೇಶನ್, ಪಡಿತರ ನಿರೀಕ್ಷಕರಾದ ಪ್ರಕಾಶ್ ಪಿಳ್ಳೈ, ಕೆ.ಪಿ.ಬಾಬು ಮತ್ತಿತರರು ತಪಾಸಣೆಯಲ್ಲಿ ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿಯೂ ಜಿಲ್ಲೆಯ ವಿವಿಧೆಡೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾ ಪೂರೈಕೆ ಅಧಿಕಾರಿ ಮಾಹಿತಿ ನೀಡಿದರು. ನಾಗರಿಕ ಸರಬರಾಜು ಇಲಾಖೆಯು ತೂಕ ಮತ್ತು ಅಳತೆ ವಿಭಾಗ ಇಲಾಖೆಯೊಂದಿಗೆ ಜಂಟಿ ತಪಾಸಣೆ ನಡೆಸುತ್ತಿದೆ.
ಸಾರ್ವಜನಿಕ ಮಾರುಕಟ್ಟೆಯಲ್ಲಿ ನಾಗರಿಕ ಸರಬರಾಜು ಅಧಿಕಾರಿಗಳಿಂದ ತಪಾಸಣೆ
0
ಸೆಪ್ಟೆಂಬರ್ 07, 2022