ಕಾಸರಗೋಡು: ವಿಕಲಚೇತನರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ವಿಕಲಚೇತನ ಪ್ರಶಸ್ತಿ-2022 ಗೆ ಅರ್ಜಿ ಸಲ್ಲಿಸಬಹುದು. ಕ್ಷೇತ್ರಕ್ಕೆ ಸಂಬಂಧಿಸಿದ ಗರಿಷ್ಠ ಸಂಖ್ಯೆಯ ಜನರ ನಾಮನಿರ್ದೇಶನಗಳನ್ನು ಪ್ರಶಸ್ತಿ ಪರಿಗಣನೆಗೆ ಪಡೆಯಲು ಪ್ರಯತ್ನಿಸಬೇಕು ಎಂದು ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆ ಡಾ.ಆರ್.ಬಿಂದು ಹೇಳಿರುವರು. ಅಕ್ಟೋಬರ್ 10ರ ಮೊದಲು ಜಿಲ್ಲಾ ಸಾಮಾಜಿಕ ನ್ಯಾಯ ಕಛೇರಿ ಅಥವಾ ಸಾಮಾಜಿಕ ನ್ಯಾಯ ನಿರ್ದೇಶನಾಲಯದಲ್ಲಿ ನಾಮಪತ್ರವನ್ನು ಸ್ವೀಕರಿಸಲಾಗುವುದು.
ಇಪ್ಪತ್ತು ವಿಭಾಗಗಳಲ್ಲಾಗಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಾರ್ವಜನಿಕ ವಲಯದ ಅತ್ಯುತ್ತಮ ನೌಕರರು, ಖಾಸಗಿ ವಲಯದ ಅತ್ಯುತ್ತಮ ಉದ್ಯೋಗಿಗಳು, ಖಾಸಗಿ ವಲಯದ ಅತ್ಯುತ್ತಮ ಎನ್ ಜಿ ಒ ಸಂಸ್ಥೆಗಳು, ಅತ್ಯುತ್ತಮ ರೋಲ್ ಮಾಡೆಲ್, ಅತ್ಯುತ್ತಮ ಸೃಜನಶೀಲ ಪ್ರತಿಭಾನ್ವಿತ ಮಗು, ಅತ್ಯುತ್ತಮ ಕ್ರೀಡಾ ಪಟು, ರಾಷ್ಟ್ರೀಯ/ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತರು, ವಿಕಲಚೇತನರಿಗೆ ಉದ್ಯೋಗ ಒದಗಿಸಿದ ಉದ್ಯೋಗದಾತರು, ವಿಕಲಚೇತನರ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪುರಸಭೆ, ಬ್ಲಾಕ್ ಪಂಚಾಯತ್, ಗ್ರಾಮ ಪಂಚಾಯತ್, ಎನ್ ಜಿ ಒ ಅಧೀನದಲ್ಲಿರುವ ಅತ್ಯುತ್ತಮ ವಿಕಲಚೇತನರ ಪುನರ್ವಸತಿ ಕೇಂದ್ರ, ಸಾಮಾಜಿಕ ನ್ಯಾಯ ಇಲಾಖೆ ಅಧೀನದಲ್ಲಿರುವ ಅತ್ಯುತ್ತಮ ಅಂಗವಿಕಲರ ಕಲ್ಯಾಣ ಸಂಸ್ಥೆ, ಸರಕಾರಿ/ಖಾಸಗಿ/ಸಾರ್ವಜನಿಕ ವಲಯದ ವಿಕಲಚೇತನರ ಸ್ನೇಹಿ ಸಂಸ್ಥೆ, ಅತ್ಯುತ್ತಮ ವಿಕಲಚೇತನ ಸೌಹಾರ್ದ ಮನರಂಜನಾ ಕೇಂದ್ರಗಳು, ವಿಕಲಚೇತನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯಕವಾದ ಯೋಜನೆಗಳು/ಉದ್ಯಮಗಳು/ಸಂಶೋಧನೆಗಳು ಎಂಬಿವುಗಳಿಗೆ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಬಹುದು.
ನಾಮನಿರ್ದೇಶನದೊಂದಿಗೆ ನಿಗದಿತ ನಮೂನೆಯಲ್ಲಿ ಅಗತ್ಯವಾದ ವಿವರಗಳನ್ನು ಒದಗಿಸಬೇಕು. ಅದಕ್ಕೆ ಅಗತ್ಯವಾದ ಮಾದರಿ ಮತ್ತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಾಮಾಜಿಕ ನ್ಯಾಯ ಕಛೇರಿ ಮತ್ತು swd.kerala.gov.in ಎಂಬ ವೆಬ್‍ಸೈಟ್‍ನಲ್ಲಿ ಲಭ್ಯವಿದೆ.
ಅಂಗವಿಕಲ ಪ್ರಶಸ್ತಿಗಾಗಿ ಅರ್ಜಿಗಳ ಆಹ್ವಾನ: ಇಪ್ಪತ್ತು ಕ್ಷೇತ್ರಗಳಲ್ಲಿ ಪ್ರಶಸ್ತಿಗಳು
0
ಸೆಪ್ಟೆಂಬರ್ 24, 2022