ತಿರುವನಂತಪುರ: ಕೇರಳದ ರಸ್ತೆಗಳ ಸ್ಥಿತಿ ಶೋಚನೀಯವಾಗಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮುಹಮ್ಮದ್ ರಿಯಾಝ್ ಹೇಳಿದ್ದಾರೆ.
ರಸ್ತೆ ನಿರ್ಮಾಣವಾದ ಆರು ತಿಂಗಳೊಳಗೆ ಹಾನಿಯಾದರೆ ನಿರ್ಮಾಣ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ರಿಯಾಜ್ ತಿಳಿಸಿರುವರು. ರಸ್ತೆ ನಿರ್ಮಾಣದ ಮೇಲ್ವಿಚಾರಣೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ರಸ್ತೆ ನಿರ್ವಹಣೆ ಅವಧಿಯಲ್ಲಿ ಯಾವುದೇ ಹಾನಿಯಾಗಬಾರದು. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮುಲಾಜಿಲ್ಲದೆ ಕ್ರಮ ಜರಗಿಸಲಾಗುತ್ತದೆ ಎಂದು ಸಚಿವರ ಎಚ್ಚರಿಕೆ ನೀಡಿದರು.
ಈ ಹಿಂದೆ ರಾಜ್ಯದ ರಸ್ತೆಗಳನ್ನು ವಿನ್ಯಾಸಗೊಳಿಸಿದ ರಸ್ತೆಗಳನ್ನಾಗಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದ್ದರು. ವಾಹನಗಳ ಸಾಂದ್ರತೆಗೆ ಅನುಗುಣವಾಗಿ ಭಾರವನ್ನು ತಡೆದುಕೊಳ್ಳುವ ರಸ್ತೆಗಳು ಕೇರಳಕ್ಕೆ ಬೇಕು. ಹೆಚ್ಚು ವಾಹನಗಳು ಬಂದಾಗ ಅದಕ್ಕೆ ತಕ್ಕಂತೆ ರಸ್ತೆ ವಿಸ್ತರಣೆ ಮಾಡಬೇಕು. ಆದರೆ ರಸ್ತೆಗಳನ್ನು ಮಾತ್ರ ಸುಸ್ಥಿತಿಯಲ್ಲಿಡಲು ಸಾಧ್ಯ ಎಂದು ಸಚಿವರು ಹೇಳಿದರು.
ಹೊಸ ರಸ್ತೆಗಳು ಆರು ತಿಂಗಳೊಳಗೆ ಹಾನಿಯಾದರೆ ಕ್ರಮ; ಮುಹಮ್ಮದ್ ರಿಯಾಝ್
0
ಸೆಪ್ಟೆಂಬರ್ 03, 2022
Tags