ನವದೆಹಲಿ: ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ಪರವಾಗಿ ಧ್ವನಿ ಎತ್ತಿರುವ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಮಹಿಳೆಯರು ಹೇಗೆ ಡ್ರೆಸ್ ಮಾಡಬೇಕು ಎಂಬುದನ್ನು ಧರ್ಮ ನಿರ್ಧರಿಸಬಾರದು ಎಂದು ಹೇಳಿದ್ದಾರೆ.
'ಮಹಿಳೆಯರು ಹೇಗೆ ಉಡುಗೆ ತೊಡಬೇಕು ಎಂಬುದನ್ನು ಧಾರ್ಮಿಕ ವ್ಯಕ್ತಿಗಳು ನಿರ್ಧರಿಸಬಾರದು. ಅವರು ಹೇಗೆ ಧರಿಸಬೇಕೆಂದು ಮಹಿಳೆಯರು ನಿರ್ಧರಿಸಲಿ. ಅವರು ಧರಿಸಿದ್ದಕ್ಕಾಗಿ ಯಾರನ್ನಾದರೂ ಶಿಕ್ಷಿಸುವ ಈ ಪ್ರತೀಕಾರದ ಸಂಸ್ಕೃತಿಯನ್ನು ಧಾರ್ಮಿಕ ಅಥವಾ ಇನ್ನಾವುದೇ ಸಂಸ್ಕೃತಿ ಅಂತ್ಯಗೊಳಿಸಲಿ ಎಂದು ಹೇಳಿದ್ದಾರೆ.
ಇರಾನ್‌ನಲ್ಲಿ ಯುವತಿ ಮಹ್ಸಾ ಅಮಿನಿ ಅವರು ದೇಶದ ನೈತಿಕತೆಯ ಪೊಲೀಸರಿಂದ ಬಂಧಿಸಲ್ಪಟ್ಟ ನಂತರ ಅವರ ಸಾವಿನ ಕುರಿತಂತೆ ಸದ್ಗುರು ಪ್ರತಿಕ್ರಿಯಿಸಿದ್ದಾರೆ. 22 ವರ್ಷ ವಯಸ್ಸಿನ ಮಹ್ಸಾಳನ್ನು ಇರಾನ್‌ನ ನೈತಿಕತೆಯ ಪೊಲೀಸರು ಸರಿಯಾಗಿ ಹಿಜಾಬ್ ಧರಿಸಿದ್ದಕ್ಕಾಗಿ ಬಂಧಿಸಿದ್ದರು. ಬಂಧನದ ನಂತರ ಆಕೆ ಕೋಮಾಕ್ಕೆ ಜಾರಿದ್ದು ಅಂತಿಮವಾಗಿ ಆಕೆ ಮೃತಪಟ್ಟಿದ್ದಳು.