ನವದೆಹಲಿ: ಮಾಜಿ ಸಚಿವೆ ಕೆ.ಕೆ.ಶೈಲಜಾ ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಿರುವ ಕುರಿತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರತಿಕ್ರಿಯಿಸಿದ್ದಾರೆ.
ಶೈಲಜಾ ಪ್ರಶಸ್ತಿಗೆ ಪರಿಗಣಿಸಿರುವ ಕುರಿತು ಮಾಹಿತಿ ನೀಡಿದರು. ಆದರೆ ಪಕ್ಷ ಪ್ರಶಸ್ತಿ ತಿರಸ್ಕರಿಸುವ ನಿಲುವು ತಳೆದಿದೆ. ಪಕ್ಷವು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದೆ. ಆರೋಗ್ಯದಲ್ಲಿ ಸಾಧನೆಯು ಸಾಮೂಹಿಕ ಪ್ರಯತ್ನದ ಫಲಿತಾಂಶವಾಗಿದೆ. ಇದನ್ನು ಕೇವಲ ಒಬ್ಬ ವ್ಯಕ್ತಿಯ ಸಾಧನೆ ಎಂದು ಪರಿಗಣಿಸುವಂತಿಲ್ಲ ಎಂದಿರುವರು.
ಮ್ಯಾಗ್ಸೆಸೆ ಪ್ರಶಸ್ತಿಯನ್ನು ಇದುವರೆಗೆ ರಾಜಕಾರಣಿಗಳಿಗೆ ನೀಡಲಾಗಿಲ್ಲ. ಫಿಲಿಪೈನ್ಸ್‍ನ ಮಾಜಿ ಅಧ್ಯಕ್ಷ ರೆಮನ್ ಮ್ಯಾಗ್ಸೆಸೆ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ. ಅವರ ಕಮ್ಯುನಿಸ್ಟ್ ವಿರೋಧಿ ನಿಲುವು ಕೂಡ ಪ್ರಶಸ್ತಿ ತಿರಸ್ಕಾರಕ್ಕೆ ಕಾರಣವಾಯಿತು ಎಂದು ಸೀತಾರಾಂ ಯೆಚೂರಿ ಹೇಳಿದ್ದಾರೆ.
ಮ್ಯಾಗ್ಸೆಸೆ ಪ್ರಶಸ್ತಿಯು ಫಿಲಿಪೈನ್ಸ್‍ನ ಆಡಳಿತಗಾರ ರೆಮನ್ ಮ್ಯಾಗ್ಸೆಸೆ ಅವರ ನೆನಪಿಗಾಗಿ ಫಿಲಿಪೈನ್ ಸರ್ಕಾರ ಸ್ಥಾಪಿಸಿದ ಪ್ರಶಸ್ತಿಯಾಗಿದೆ. ರೆಮನ್ ಮ್ಯಾಗ್ಸೆಸೆ ತನ್ನ ಆಳ್ವಿಕೆಯಲ್ಲಿ ಕಮ್ಯುನಿಸ್ಟ್ ಗೆರಿಲ್ಲಾಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡರು. ಇದನ್ನೇ ಸಿಪಿಎಂ ಪ್ರಶಸ್ತಿ ಪಡೆಯಲು ಅನುಮತಿ ನಿರಾಕರಿಸಲು ಕಾರಣ. ಶನಿವಾರ ಮ್ಯಾಗ್ಸೆಸೆ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಆದರೆ ಶೈಲಜಾ ಮೂರು ತಿಂಗಳ ಹಿಂದೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಇದರ ಬೆನ್ನಲ್ಲೇ ಆಯೋಜಕರು ಮತ್ತೊಬ್ಬ ವ್ಯಕ್ತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಮ್ಯಾಗ್ಸೆಸೆ ಪ್ರಶಸ್ತಿಯನ್ನು ಏμÁ್ಯದ ನೊಬೆಲ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ.
ಶೈಲಜಾ ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕಾರದ ಹಿಂದೆ ಪಕ್ಷವೇ ಕಾರಣ: ಪ್ರಶಸ್ತಿ ಬಗ್ಗೆ ಸ್ಪಷ್ಟನೆ ನೀಡಿದ ಸೀತಾರಾಂ ಯೆಚೂರಿ
0
ಸೆಪ್ಟೆಂಬರ್ 04, 2022