ತಿರುವನಂತಪುರ: ಕಂಡಕ್ಟರ್ ರಹಿತ ಬಸ್ ಸೇವೆಯೊಂದಿಗೆ ಕೆ.ಎಸ್.ಆರ್.ಟಿ.ಸಿ. ಹೊಸ ಉಪಕ್ರಮಕ್ಕೆ ಮುಂದಾಗಿದೆ. ತಿರುವನಂತಪುರಂನಿಂದ ಎರ್ನಾಕುಳಂಗೆ ಮತ್ತು ಹಿಂತಿರುಗಲು ದೂರದ ಪ್ರಯಾಣಿಕರಿಗೆ ತ್ವರಿತವಾಗಿ ಪ್ರಯಾಣಿಸಲು ಕೆ.ಎಸ್.ಆರ್.ಟಿ.ಸಿ ಎಂಡ್-ಟು-ಎಂಡ್ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದೆ.
ರಜಾ ದಿನಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲೂ ಸೇವೆ ನಡೆಸಲು ಯೋಜನೆ ರೂಪಿಸಲಾಗಿದೆ.
ಈ ಸೇವೆಗೆ ಎಸಿ ಲೋ ಫೆÇ್ಲೀರ್ ಬಸ್ ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತಿರುವನಂತಪುರದಿಂದ ಬೆಳಗ್ಗೆ 5.10ಕ್ಕೆ ಹೊರಟು 9.40ಕ್ಕೆ ಎರ್ನಾಕುಳಂ ತಲುಪಿ ಸಂಜೆ 5.20ಕ್ಕೆ ಎರ್ನಾಕುಳಂನಿಂದ ಹೊರಟು 9.50ಕ್ಕೆ ತಿರುವನಂತಪುರ ತಲುಪುವ ವ್ಯವಸ್ಥೆ ಇದೆ.
ಕೊಲ್ಲಂ ಅಯಾತ್ ಫೀಡರ್ ನಿಲ್ದಾಣ ಮತ್ತು ಅಲಪ್ಪುಳ ಕೊಮ್ಮಡಿ ಫೀಡರ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಬಸ್‍ಗಳು ಒಂದು ನಿಮಿಷ ಮಾತ್ರ ನಿಲ್ಲುತ್ತವೆ. ಭಾನುವಾರದಿಂದ ಪ್ರಯಾಣಿಕರು ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಪುಶ್ ಬ್ಯಾಕ್ ಸೀಟುಗಳನ್ನು ಹೊಂದಿರುವ ಎರಡು ಬಸ್‍ಗಳನ್ನು ಎಂಡ್ ಟು ಎಂಡ್ ಸೇವೆಗೆ ಕಾಯ್ದಿರಿಸಲಾಗಿದೆ. ತಿರುವನಂತಪುರಂ ಸೆಂಟ್ರಲ್ ಬಸ್ ನಿಲ್ದಾಣ, ಕೊಲ್ಲಂ ಆಯತ್ ಮತ್ತು ಅಲಪ್ಪುಳ ಕೊಮ್ಮಡಿ ಫೀಡರ್ ನಿಲ್ದಾಣಗಳಿಂದ ಬಸ್ ಹೊರಡುವ ಅರ್ಧ ಗಂಟೆ ಮೊದಲು ಆಫ್‍ಲೈನ್, ಟಿಕೆಟ್‍ಗಳನ್ನು ಬುಕ್ ಮಾಡಲು ವ್ಯವಸ್ಥೆಗೊಳಿಸಲಾಗಿದೆ.
ಕಂಡಕ್ಟರ್ ಇಲ್ಲ, ಒಂದೇ ನಿಲ್ದಾಣ: ಬುಕ್ಕಿಂಗ್ ಆರಂಭ: ಕೆ.ಎಸ್.ಆರ್.ಟಿ.ಸಿ ಹೊಸ ತಡೆ ರಹಿತ ಬಸ್ ಸೇವೆ ಆರಂಭ
0
ಸೆಪ್ಟೆಂಬರ್ 25, 2022