HEALTH TIPS

ರಕ್ಷಣಾ ಸಂಬಂಧ ವೃದ್ಧಿಗಾಗಿ ಮಂಗೋಲಿಯಾ, ಜಪಾನ್‌ಗೆ ರಾಜನಾಥ್‌ ಸಿಂಗ್‌ ಭೇಟಿ

 

            ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರದಿಂದ ಐದು ದಿನಗಳ ಕಾಲ ಮಂಗೋಲಿಯಾ ಮತ್ತು ಜಪಾನ್‌ಗೆ ಭೇಟಿ ನೀಡಲಿದ್ದಾರೆ. ಉಭಯ ದೇಶಗಳೊಂದಿಗೆ ಭಾರತದ ಕಾರ್ಯತಂತ್ರ ಮತ್ತು ರಕ್ಷಣಾ ಸಂಬಂಧಗಳನ್ನು ವಿಸ್ತರಿಸುವ ಉದ್ದೇಶದಿಂದ ಈ ಪ್ರವಾಸ ಕೈಗೊಂಡಿದ್ದಾರೆ.

           ಸೆಪ್ಟೆಂಬರ್ 5 ರಿಂದ 7ರ ವರೆಗೆ ಸಿಂಗ್ ಅವರು ಮಂಗೋಲಿಯಾ ದೇಶಕ್ಕೆ ಭೇಟಿ ನೀಡಲಿದ್ದಾರೆ. ಭಾರತದ ರಕ್ಷಣಾ ಸಚಿವರೊಬ್ಬರು ಪೂರ್ವ ಏಷ್ಯಾಕ್ಕೆ ಕೈಗೊಂಡಿರುವ ಮೊಟ್ಟ ಮೊದಲ ಪ್ರವಾಸ ಇದಾಗಿದೆ.

                    ಸೆ.8 ಮತ್ತು 9ರಂದು ರಾಜನಾಥ್‌ ಸಿಂಗ್‌ ಜಪಾನ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಸಿಂಗ್‌ ಮತ್ತು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಜಪಾನ್‌ ರಕ್ಷಣಾ ಮತ್ತು ವಿದೇಶಾಂಗ ಸಚಿವರೊಂದಿಗೆ 2+2 ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

                ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರು ಭಾರತಕ್ಕೆ ಭೇಟಿ ನೀಡಿದ ಐದು ತಿಂಗಳ ಬೆನ್ನಲ್ಲೇ 2+2 ಸಭೆ ನಡೆಯುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries