HEALTH TIPS

ಮಂಜೇಶ್ವರದಲ್ಲಿ ಬಹುಭಾಷಾ ಸಮ್ಮೇಳನ: ಸಂಘಟನಾ ಸಮಿತಿ ರಚನೆ


               ಮಂಜೇಶ್ವರ: ರಾಷ್ಟ್ರಕವಿ ಗೋವಿಂದ ಪೈ ಅವರ ನಾಡು ವಿವಿಧ ಭಾμÉಗಳ ಸಂಗಮಕ್ಕೆ ವೇದಿಕೆ ಕಲ್ಪಿಸುತ್ತಿದೆ.
          ಕೇರಳ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಮಂಜೇಶ್ವರದಲ್ಲಿ ಬಹುಭಾμÁ ಸಮ್ಮೇಳನ ನಡೆಯಲಿದೆ. ಸಮ್ಮೇಳನಕ್ಕಾಗಿ 251 ಸದಸ್ಯರ ಸಂಘಟನಾ ಸಮಿತಿಯನ್ನು ರಚಿಸಲಾಗಿದೆ.
            ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ವಿ.ಕುಂಞÂರಾಮನ್ ಅವರು ಬುಧವಾರ ಮಂಜೇಶ್ವರ ಗಿಳಿವಿಂಡಲ್ಲಿ ನಡೆದ ಸಂಘಟನಾ ಸಮಿತಿ ಸಭೆಯನ್ನು ಉದ್ಘಾಟಿಸಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಬಹುಭಾμÁ ವಿದ್ವಾಂಸ ಡಾ.ಎ.ಎಂ.ಶ್ರೀಧರನ್, ರಾಜ್ಯ ಗ್ರಂಥಾಲಯ ಪರಿಷತ್ತಿನ ಮಾಜಿ ಕಾರ್ಯದರ್ಶಿ                   ನ್ಯಾಯವಾದಿ.ಪಿ.ಅಪ್ಪುಕುಟ್ಟನ್, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನ್, ನಾರಾಯಣ ಚೆಂಬಲ್ತಿಮಾರ್, ರಾಜಶ್ರೀ ಟಿ.ರೈ ಮಾತನಾಡಿದರು. ಕೇರಳ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸಚ್ಚಿದಾನಂದನ್ ಮತ್ತು ಕಾರ್ಯದರ್ಶಿ ಸಿ.ಪಿ.ಅಬೂಬಕರ್ ಆನ್‍ಲೈನ್‍ನಲ್ಲಿ ಮಾತನಾಡಿದರು.
          ಕೇರಳ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸದಸ್ಯ ಎಂ.ಕೆ.ಮನೋಹರನ್ ಸ್ವಾಗತಿಸಿ, ಜಯಚಂದ್ರ ಕುಟ್ಟಮತ್ ವಂದಿಸಿದರು. ಕೇರಳ ಸಾಹಿತ್ಯ ಅಕಾಡೆಮಿ ಸದಸ್ಯ ಇ.ಪಿ. ರಾಜಗೋಪಾಲನ್ ಕಾರ್ಯಕ್ರಮ ನಿರೂಪಿಸಿದರು.
            ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷರಾಗಿ, ಕೆ.ಆರ್.ಜಯಾನಂದ ಕಾರ್ಯಾಧ್ಯಕ್ಷರಾಗಿ, ಎಂ.ಕೆ.ಮನೋಹರನ್ ಪ್ರಧಾನ ಸಂಚಾಲಕರಾಗಿ ಸಂಘಟನಾ ಸಮಿತಿ ರಚಿಸಲಾಯಿತು. ನವೆಂಬರ್ ಕೊನೆಯ ವಾರ ಮೂರು ದಿನಗ¼ಲ್ಲಿÀ  ಮಂಜೇಶ್ವರದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಬಹುಭಾμÁ ಸಮ್ಮೇಳನ
                     ನಡೆಯಲಿದ್ದು, ಉಪನ್ಯಾಸಗಳು, ಚರ್ಚೆಗಳು, ನಾಟಕಗಳು, ಭಾμÁ ಪ್ರದರ್ಶನಗಳು, ಚಲನಚಿತ್ರ ಪ್ರದರ್ಶನಗಳು, ಚಲನಚಿತ್ರೋತ್ಸವಗಳು, ಭಾμÁ ಪ್ರದರ್ಶನಗಳು, ಕವನ ವಾಚನಗಳು ಇತ್ಯಾದಿಗಳನ್ನು ನಡೆಯಲಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries