ಆಲಪ್ಪುಳ: ಬೆಕ್ಕುಕಚ್ಚಿ ಚಿಕಿತ್ಸೆಯಲ್ಲಿದ್ದ ವಯೋವೃದ್ಧರೊಬ್ಬರು ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸಾವಿಗೆ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಬಲೆಯಲ್ಲಿ ಸಿಕ್ಕಿಬಿದ್ದಿದ್ದ ಬೆಕ್ಕನ್ನು ರಕ್ಷಿಸುವ ಪ್ರಯತ್ನದಲ್ಲಿ ಬೆಕ್ಕು ಕಚ್ಚಿದೆ.
ಕಚ್ಚಿದ ನಂತರ ಶಶಿಧರ ಎಂಬವರನ್ನು ತುರವೂರು ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚುಚ್ಚುಮದ್ದು ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ಗಂಟೆಗಳ ವೀಕ್ಷಣೆ ಬಳಿಕ ಅಧಿಕಾರಿಗಳು ಶಶಿಧರನ್ ಅವರನ್ನು ವಾಪಸ್ ಕಳುಹಿಸಿದ್ದಾರೆ. ವಾಪಸ್ಸು ಬರುವಾಗ ತುರವೂರು ತಲುಪುವ ವೇಳೆಗೆ ತಲೆಸುತ್ತು ಕಾಣಿಸಿಕೊಂಡು ಮತ್ತೆ ತುರವೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ, ಸೋಡಿಯಂ ಮತ್ತು ಸಕ್ಕರೆ ಕಡಿಮೆಯಾಯಿತು.
ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಮನೆಗೆ ವಾಪಸ್ ಕಳುಹಿಸಲಾಯಿತು. ಶಶಿಧರನ್ ಮನೆಗೆ ಬಂದಾಗ ಮತ್ತೆ ಕುಸಿದು ಬಿದ್ದರು. ಬಳಿಕ ಸಂಬಂಧಿಕರು ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದಾರೆ. 7ರಂದು ರಾತ್ರಿ ಹೃದಯಾಘಾತವಾಗಿದ್ದು, ಬೆಳಗ್ಗೆ 11 ಗಂಟೆಗೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಂಬಂಧಿಕರಿಗೆ ಲಭಿಸಿದೆ. ಘಟನೆ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಇನ್ನೂ ಸ್ಪಂದಿಸಿಲ್ಲ.
ಬೆಕ್ಕು ಕಚ್ಚಿ ಚಿಕಿತ್ಸೆಯಲ್ಲಿದ್ದ ವೃದ್ಧ ಸಾವು: ಸಾವಿನ ಕಾರಣ ಸ್ಪಷ್ಟಪಡಿಸದ ಅಧಿಕಾರಿಗಳು
0
ಸೆಪ್ಟೆಂಬರ್ 10, 2022
Tags