HEALTH TIPS

ಸ್ವರ್ಗದಲ್ಲಿ ರಂಜಿಸಿದ ಓಣಂ ಹಬ್ಬದ ಆಚರಣೆ


         ಪೆರ್ಲ:  ಮಾತೃಭೂಮಿ ಸ್ವರ್ಗ ಇದರ ಆಶ್ರಯದಲ್ಲಿ ನಡೆದ ನಾಡ ಹಬ್ಬ ಓಣಂ ಆಚರಣೆಯು ವಿವಿಧ ಕಾರ್ಯಕ್ರಮಗಳೊಂದಿಗೆ ಮನೋರಂಜನೆಯನ್ನು ನೀಡಿತು. ಕಾರ್ಯಕ್ರಮದ ಪೂರ್ವಭಾವಿಯಾಗಿ ಮಹಾಬಲಿ(ಮಾವೇಲಿ),ಯಕ್ಷಗಾನ ವೇಷಧಾರಿ,ಗೊಂಬೆ ವೇಷಗಳೊಂದಿಗೆ ನಡೆದ ಆಕರ್ಷಕ ಮೆರವಣಿಗೆಯು ವಿಶೇಷ ಮೆರಗು ನೀಡಿತು. ಸುಂದರ ಮೂಲ್ಯ ಅಜಕ್ಕಳಮೂಲೆ ಅವರ ಮಹಾಬಲಿ ವೇಷ, ವತ್ಸಲ ಪೆರಿಕ್ಕಾನ ಹಾಗೂ
ಅನನ್ಯ ಮೈಕಾನ ಅವರ ಯಕ್ಷಗಾನ ವೇಷಗಳು ಮೆರವಣಿಗೆಗೆ ಮೆರಗು ನೀಡಿದವು.
           ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ರಾಮಚಂದ್ರ ಎಂ ವಹಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪಡ್ರೆ ಗ್ರಾಮಾಧಿಕಾರಿಗಳಾದ ಶಂಕರ ಕುಂಜತ್ತೂರು ಮಾತಾಡಿ, ಭೂಮಿ ತಾಯಿ ನಾಮಂಕಿತ ಮಾತೃಭೂಮಿ ಸಂಘಟನೆ ಆಯೋಜಿಸಿದ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಓಣಂ ಹಬ್ಬದ ಆಚರಣೆಯು ಜನತೆಯನ್ನು ಒಗ್ಗೂಡಿಸುವಲ್ಲಿ ಮಹತ್ವದ್ದಾಗಿದ್ದು ಮುಂದಿನ ಪೀಳಿಗೆಯ ಅನುಸರಣೆಗೆ ಸಹಕಾರಿ ಎಂದು ನುಡಿದರು. ವಿವಿಧ ಮಾಸಗಳಲ್ಲಿ ವಿವಿಧ ಆಚರಣೆಯು,ವಿವಿಧ ಕಡೆಗಳಲ್ಲಿ ವಿವಿಧ ಹೆಸರುಗಳಲ್ಲಿ ಆಚರಣೆ,ತುಳುನಾಡಿನ ಆಚರಣೆಗಳೊಂದಿಗೆ ಬೆಸೆದುಕೊಂಡಿದೆ. ಹಬ್ಬದ ಆಶಯಗಳೊಂದಿಗೆ ಆಚರಣೆ ಸಮಂಜಸ ಎಂದು ನುಡಿದರು.



          ಪ್ರಧಾನ ಅಭ್ಯಾಗತರಾಗಿ ಪ್ರಗತಿ ಸ್ಪೆಷಲ್ ಶಾಲಾ ಶಿಕ್ಷಕಿ ರಮ್ಯಾ, ಸ್ವರ್ಗ ಶಾಲಾ ಅಧ್ಯಾಪಕಿ ಗೀತಾಂಜಲಿ, ಪ್ರಗತಿಪರ ಲೇಖಕ ಸುಂದರ ಬಾರಡ್ಕ, ಮಾತೃಭೂಮಿ ಸಂಘಟನೆಯ ಅಧ್ಯಕ್ಷ ರವಿರಾಜ್ ಎಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಳೆದ ಸಾಲಿನ ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲಾ ವಿಷಯಗಲ್ಲೂ ಎ ಪ್ಲಸ್ ಪಡೆದ ಧನುμï ಪಿ.ಪೆರಿಕ್ಕಾನ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಪಡೆದ ವಿಶ್ರೀತಾ ವಾಣೀನಗರ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸಂಘಟನೆ ಕಾರ್ಯದರ್ಶಿ ನವೀನ್ ಎಂ ಸ್ವಾಗತಿಸಿದರು. ಬಾಬು ಎಸ್ ಸ್ವರ್ಗ, ಪೂರ್ಣಿಮ ಬೈರಡ್ಕ, ಶಶಿಕಲಾ ಕೆದಂಬಾಯಿಮೂಲೆ, ಕೀರ್ತಿ ಬೈರಡ್ಕ, ರಾಜೇಶ್ ಬೈರಡ್ಕ ಸಂಘಟನೆಯ ಆಶಯದ ಗೀತೆ ಹಾಡಿದರು. ರಶ್ಮಿ ಎಸ್ ಸಂಜಗದ್ದೆ ಮತ್ತು ಕಾವ್ಯಶ್ರೀ ಸ್ವರ್ಗ ಪ್ರಾರ್ಥಿಸಿದರು. ರಾಜೇಶ್ ಬೈರಡ್ಕ ಕಾರ್ಯಕ್ರಮ ನಿರೂಪಿಸಿದರು. ಚಂದ್ರಾವತಿ ಎಂ ವಂದಿಸಿದರು. ಬಳಿಕ ಸಂಘಟನೆಯ ಸದಸ್ಯೆಯರಿಂದ ತಿರುವಾದಿರಕಳಿ ನೃತ್ಯ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಪುಟಾಣಿಗಳಿಗೆ, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries