ಕೊಚ್ಚಿ: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಜೋಡೋ ಯಾತ್ರೆಯಿಂದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೈಕೋರ್ಟ್‍ನ ವಕೀಲರೊಬ್ಬರು ಈ ಅರ್ಜಿ ಸಲ್ಲಿಸಿದ್ದಾರೆ.
ಇಡೀ ರಸ್ತೆ ಜೋಡೋ ಕಾರ್ಯಕರ್ತರಿಂದ ಆವೃತಗೊಂಡು ಸಂಚಾರ ಮೊಟಕಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಪ್ರಯಾಣ ಮಾಡಬೇಕು. ಇನ್ನೊಂದು ಬದಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿನ ಆಗ್ರಹವಾಗಿದೆ. ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಮತ್ತು ಇತರರ ವಿರುದ್ದ ಅರ್ಜಿಯಲ್ಲಿ ಪ್ರತಿ ಕಕ್ಷಿದಾರರನ್ನಾಗಿಸಲಾಗಿದೆ.
ಪೋಲೀಸ್ ಭದ್ರತೆಗೆ ಹಣ ವಸೂಲಿ ಮಾಡಬೇಕು ಎಂದೂ ಮನವಿಯಲ್ಲಿ ಆಗ್ರಹಿಸಲಾಗಿದೆ. ಮುಂದಿನ ದಿನದಲ್ಲಿ ಹೈಕೋರ್ಟ್ ಅರ್ಜಿಯನ್ನು ಪರಿಗಣಿಸಲಿದೆ. ಭಾರತ್ ಜೋಡೋ ಯಾತ್ರೆಯಿಂದ ಉಂಟಾದ ಟ್ರಾಫಿಕ್ ಜಾಮ್ ಮೊದಲಿನಿಂದಲೂ ಸುದ್ದಿಯಲ್ಲಿತ್ತು. ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಹೈಕೋರ್ಟ್ ಆದೇಶದ ನಡುವೆಯೂ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ.
ಸ್ವಾಗತ ಪ್ರದೇಶಗಳು ಇತ್ಯಾದಿಗಳಲ್ಲಿ ಆಯೋಜಿಸಲಾದ ಕಲಾತ್ಮಕ ಪ್ರದರ್ಶನಗಳಿಗಾಗಿ ಪ್ರತಿ ಹಂತದಲ್ಲೂ ಅರ್ಧ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಮಾಡಲಾಗುವುದು. ರಾಹುಲ್ ಭದ್ರತೆಯ ಭಾಗವಾಗಿರುವ ನಿರ್ಬಂಧಗಳು ಸೇರಿಕೊಂಡಾಗ, ಪಾದಚಾರಿಗಳ ಸಹಿತ ವಾಹನ ಸವಾರರಿಗೆ ತಲೆನೋವು ಸೃಷ್ಟಿಯಾಗುತ್ತಿದೆ.
ರಸ್ತೆಗಳಲ್ಲಿ ಸಂಚಾರ ದಟ್ಟಣೆ; ಭಾರತ್ ಜೋಡೋ ಯಾತ್ರೆ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ
0
ಸೆಪ್ಟೆಂಬರ್ 20, 2022