ಕಾಸರಗೋಡು: ಜಿಲ್ಲೆಯಲ್ಲಿ ಮಾದಕ ದ್ರವ್ಯ ವಿರುದ್ಧ ಕಾರ್ಯಾಚರಣೆ ಮುಂದುವರಿದಿದ್ದು, 'ಯೋಧಾ'ಕಾರ್ಯಾಚರಣೆಯನ್ವಯ ಲಕ್ಷಾಂತರ ರಊ. ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಬೇಕಲ ಡಿವೈಎಸ್‍ಪಿ ಸಿ.ಕೆ ಸುನಿಲ್ ನೇತೃತ್ವದ ಪೊಲೀಸರ ತಂಡ ಬೇಕಲಕೋಟೆ ಸನಿಹ ನಡೆಸಿದ ಕಾರ್ಯಾಚರಣೆಯನ್ವಯ ಪಡನ್ನಕ್ಕಾಡ್ ನಿವಾಸಿ ರಿಯಾಸ್ ಎಂಬಾತನನ್ನು ಬಂಧಿಸಿ, ಈತನ ವಶದಲ್ಲಿದ್ದ 75ಗ್ರಾಂ ಎಂಡಿಎಂಎ ಹಾಗೂ 5ಗ್ರಾಂ ಆ್ಯಶಿಷ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಎಂಡಿಎಂಎ, ಗಾಂಜಾ, ಆ್ಯಶಿಷ್ ಆಯಿಲ್ ಸೇರಿದಂತೆ ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟ ಹೆಚ್ಚುತ್ತಿರುವುದನ್ನು ಮನಗಂಡು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ದೇಶನ ಮೇರೆಗೆ 'ಯೋಧಾ'ಎಂಬ ಹೆಸರಿನಲ್ಲಿ ವಿಶೇಷ ತಂಡವನ್ನು ರಚಿಸಿ, ಕಾರ್ಯಾಚರಣೆ ನಡೆಸಲಾಗುತ್ತಿದೆ.
ಆಪರೇಶನ್ 'ಯೋಧಾ': ಬೇಕಲದಲ್ಲಿ ಭಾರಿ ಪ್ರಮಾಣದ ಮಾದಕ ದ್ರವ್ಯ ವಶ, ಒಬ್ಬನ ಬಂಧನ
0
ಸೆಪ್ಟೆಂಬರ್ 30, 2022