ಸತತ ನಾಲ್ಕು ಸೆಷನ್‌ಗಳಲ್ಲಿ ಏರಿಕೆಯನ್ನು ಕಂಡಿದ್ದ ಷೇರು ಪೇಟೆಯು ಬುಧವಾರ ವಹಿವಾಟಿನ ಆರಂಭದಲ್ಲೇ ಪಾತಾಳಕ್ಕೆ ಕುಸಿದಿದೆ. ವಹಿವಾಟಿನ ಅಂತ್ಯದಲ್ಲಿಯೂ ಷೇರು ಪೇಟೆ ನಷ್ಟವನ್ನು ವಿಸ್ತರಿಸಿದೆ. ಆದರೆ ನಿಫ್ಟಿ ಮಾತ್ರ 18 ಸಾವಿರದಿಂದ ಕೆಳಕ್ಕೆ ಇಳಿದಿಲ್ಲ.
ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 1,154 ಅಂಕ ಕುಸಿದು 59,417.12ಕ್ಕೆ ತಲುಪಿತ್ತು. ನಿಫ್ಟಿ 17,800ಕ್ಕೆ ಇಳಿದು ವಹಿವಾಟು ಆರಂಭ ಮಾಡಿತ್ತು. ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 224 ಅಂಕ ಅಥವಾ ಶೇಕಡ 0.37ರಷ್ಟು ಕುಸಿದು 60,346.97 ಕ್ಕೂ ಕೆಳಕ್ಕೆ ಇಳಿದಿದೆ. ಇನ್ನು ನಿಫ್ಟಿ 66 ಅಂಕ ಅಥವಾ ಶೇಕಡ 0.37ರಷ್ಟು ಕುಸಿದು 18,003.75ಕ್ಕೆ ವಹಿವಾಟು ಅಂತ್ಯ ಮಾಡಿದೆ.
ಇನ್ನು ಬಿಎಸ್‌ಇಯಲ್ಲಿ ಆಯಿಲ್ & ಗ್ಯಾಸ್, ಕ್ಯಾಪಿಟಲ್ ಗೂಡ್ಸ್ ಮತ್ತು ಎನರ್ಜಿ ನಷ್ಟವನ್ನು ಕಂಡಿದೆ. ಮೆಟಲ್ ಸೂಚ್ಯಂಕ ಲಾಭವನ್ನು ದಾಖಲಿಸಿದೆ. ಫೈನಾನ್ಸ್ ಸ್ಟಾಕ್‌ಗಳು ಕೂಡಾ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 95 ಡಾಲರ್‌ಗಿಂತ ಕೆಳಕ್ಕೆ ಇಳಿದಿದೆ. ರೂಪಾಯಿ 29 ಪೈಸೆ ಕುಸಿದು ರೂಪಾಯಿ 79.44ಕ್ಕೆ ಇಳಿದಿದೆ.
ಒಟ್ಟಾರೆಯಾಗಿ ಷೇರು ಮಾರುಕಟ್ಟೆಯು ಭಾರೀ ಕುಸಿತವನ್ನು ದಾಖಲಿಸಿರುವ ಸಂದರ್ಭದಲ್ಲಿ ಐಸಿಐಸಿಐ ಬ್ಯಾಂಕ್, ಐಟಿಸಿ, ಎನ್‌ಟಿಪಿಸಿ, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ ಮೊದಲಾದ ಒಟ್ಟಾಗಿ 217 ಸ್ಟಾಕ್‌ಗಳು 52 ವಾರಗಳ ಏರಿಕೆಯಾಗಿದೆ.
ಆರಂಭಿಕ ವಹಿವಾಟಿನಲ್ಲಿ ಯಾವೆಲ್ಲ ಸ್ಟಾಕ್‌ಗಳು ಇಳಿಕೆ
ಆರಂಭಿಕ ವಹಿವಾಟಿನಲ್ಲಿ ಟಾಟಾ ಸ್ಟೀಲ್ಸ್, ಪವರ್ ಗ್ರಿಡ್, ಸಿಪ್ಲಾ, ಹಿಂದೂಸ್ತಾನ್ ಯೂನಿಲಿವರ್, ಬಜಾಜ್ ಫೈನಾನ್ಸ್, ಅದಾನಿ ಎಂಟರ್‌ಟೈನ್‌ಮೆಂಟ್, ಎಲ್&ಟಿ, ಎಸ್‌ಬಿಐ ಇನ್ಶೂರೆನ್ಸ್, ಬಿಎಸ್‌ಐ ಲೈಫ್, ಇಂಡಸ್‌ಇಂಡ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಕೋಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಅದಾನಿ ಪೋರ್ಟ್ಸ್, ಹಿರೋ ಮೋಟರ್ಸ್, ರಿಲಯನ್ಸ್, ಭಾರ್ತಿ ಏರ್‌ಟೆಲ್, ಟಾಟಾ ಮೋಟರ್ಸ್, ಎಚ್‌ಸಿಎಲ್ ಟೆಕ್, ಎಚ್‌ಡಿಎಫ್‌ಸಿ, ದಿವಿಸ್ ಲ್ಯಾಬ್, ಟೈಟಾನ್, ಹಿಂಡಾಲ್ಕೊ, ಈಚರ್ ಮೋಟರ್ಸ್, ಎನ್‌ಟಿಪಿಸಿ, ಇನ್ಫೋಸಿಸ್ಮ ಟಿಸಿಎಸ್, ಗ್ರಾಸಿಮ್, ವಿಪ್ರೋ, ಟೆಕ್ ಎಂ ಸ್ಟಾಕ್ ಕುಸಿತವಾಗಿದೆ.
ಯಾವ ಸ್ಟಾಕ್ ಏರಿಕೆ, ಇಳಿಕೆ
ವಹಿವಾಟಿನ ಅಂತ್ಯದಲ್ಲಿ ಇನ್ಫೋಸಿಸ್ ಸ್ಟಾಕ್ ಭಾರೀ ಇಳಿಕೆಯನ್ನು ಕಂಡ ಸ್ಟಾಕ್ ಆಗಿದೆ. ಶೇಕಡ 4.50ರಷ್ಟು ಸ್ಟಾಕ್ ಕುಸಿದು ರೂಪಾಯಿ 1,475.40 ಕ್ಕೆ ತಲುಪಿದೆ. ಇನ್ನು ಬಜಾಜ್ ಫಿನ್‌ಸರ್ವ್ ಸ್ಟಾಕ್ ಶೇಕಡ 1.15ರಷ್ಟು ಹೆಚ್ಚಳವಾಗಿ ರೂಪಾಯಿ 1,805.35ಕ್ಕೆ ತಲುಪಿದೆ. ಇನ್ನು ನಿಫ್ಟಿ ಪಿಎಸ್‌ಯು ಬ್ಯಾಂಕ್ ಸ್ಟಾಕ್ ಬೆಸ್ಟ್ ಸೆಕ್ಟರ್ ಆಗಿದ್ದು ನಿಫ್ಟಿ ಐಟಿ ಸೆಕ್ಟರ್ ಭಾರೀ ನಷ್ಟವನ್ನು ದಾಖಲಿಸಿದೆ.