ಬದಿಯಡ್ಕ: ಗಡಿನಾಡು ಕಾಸರಗೋಡಿನ ದಶಮಾನೋತ್ತರ ಸಂಸ್ಥೆ ರಂಗಸಿರಿ ಸಾಂಸ್ಕøತಿಕ ವೇದಿಕೆಯು ಬದಿಯಡ್ಕ ಕೇಂದ್ರೀಕರಿಸಿಕೊಂಡು ನಾಡುನುಡಿ ಸಂರಕ್ಷಣೆಯ ಹಲವಾರು ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಸಂಸ್ಥೆಯು ಈ ವರ್ಷವೂ ರಂಗಸಿರಿ ದಸರಾ ಯಕ್ಷ ಪಯಣ ನಡೆಸುತ್ತಿದೆ. ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 4ವರೆಗೆ ಪ್ರತಿದಿನವೂ ರಂಗಸಿರಿ ತಂಡದಿಂದ ವಿವಿಧೆಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ. ಪ್ರತಿದಿನವೂ ವಿವಿಧೆಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗ, ಶಾಲೆಯ ಜೊತೆಗೆ ಯಕ್ಷಗಾನ ಪ್ರದರ್ಶನಗಳನ್ನೂ ನಿಭಾಯಿಸುವ ಶಕ್ತಿಯನ್ನು ನೀಡಲಿದೆ. ಆ ಮೂಲಕ ಮೇಳ ತಿರುಗಾಟದ ಪುಟ್ಟ ಅನುಭವವೂ ದೊರಕುತ್ತದೆ. ನಾಡಹಬ್ಬ ದಸರಾ ಪ್ರಯುಕ್ತ ಗಡಿನಾಡಿನಿಂದ "ರಂಗಸಿರಿ ದಸರಾ ಯಕ್ಷ ಪಯಣ" ಗಮನಾರ್ಹವಾಗಿದೆ.
ರಂಗಸಿರಿಯ ಈ ವರ್ಷದ ಪಯಣ ಸೆ. 26 ರಂದು ಸಂಜೆ 4 ಕ್ಕೆ ಬದಿಯಡ್ಕದ ನವಜೀವನ ರಸ್ತೆಯಲ್ಲಿನ ರಾಮಲೀಲಾದಲ್ಲಿ ಉದ್ಘಾಟನೆ ಮತ್ತು ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ನಾಡಿನ ಹಲವಾರು ಕವಿಗಳು ಪಾಲ್ಗೊಳ್ಳಲಿದ್ದಾರೆ.
ರಂಗಸಿರಿ ದಸರಾ ಯಕ್ಷ ಪಯಣ ಕಾರ್ಯಕ್ರಮಗಳ ವಿವರ:
ಸೆ. 27 ರಂದು ಸಂಜೆ 5.30-8.30 ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸುಂದೋಪಸುಂದ ಕಾಳಗ, ಇಂದ್ರಜಿತು ಕಾಳಗ ಪ್ರದರ್ಶನ ನಡೆಯಲಿದೆ. 28 ರಂದು ಸಂಜೆ 6:ರಿಂದ -9ರ ವರೆಗೆ ಮಾಣಿಲ ಶ್ರೀಧಾಮದಲ್ಲಿ ಅತಿಕಾಯ ಮೋಕ್ಷ,ಸುಧನ್ವ ಮೋಕ್ಷ, 29 ರಂದು ಸಂಜೆ 7 ರಿಂದ 9 ರವರೆಗೆ ಹೊಸಂಗಡಿ ರಕ್ತೇಶ್ವರಿ ಸನ್ನಿಧಿಯಲ್ಲಿ ಮೀನಾಕ್ಷಿ ಕಲ್ಯಾಣ, 30 ರಂದು ಸಂಜೆ 6 ರಿಂದ 9 ರ ವರೆಗೆ ಅಗಲ್ಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮುರಾಸುರ ವಧೆ, ಅ.1 ರಂದು ಸಂಜೆ 6 ರಿಂದ 8:30ರ ವರೆಗೆ ರಾಜರಾಜೇಶ್ವರಿ ದೇವಸ್ಥಾನ ಮುಂಡಪಳ್ಳದಲ್ಲಿ ಏಕಾದಶೀ ದೇವಿ ಮಹಾತ್ಮೆ, 2 ರಂದು ಸಂಜೆ 6 ರಿಂದ 9 ರವರೆಗೆ ಶ್ರೀಧಾಮ ಮಾಣಿಲದಲ್ಲಿ ಗಂಧರ್ವ ಮೋಕ್ಷ, ಇಂದ್ರಜಿತು ಕಾಳಗ, 03 ರಂದು ರಾತ್ರಿ 8 ರಿಂದ 10:30 ರವರೆಗೆ ಶ್ರೀಸದನ ಶುಳುವಾಲುಮೂಲೆಯಲ್ಲಿ ಏಕಾದಶೀ ದೇವಿ ಮಹಾತ್ಮೆ, 04 ರಂದು ಬೆಳಗ್ಗೆ 9:30 ರಿಂದ 12:30ರ ವರೆಗೆ ದುರ್ಗಾಲಯ ಜೋಡುಕಲ್ಲು ನಲ್ಲಿ ಮೀನಾಕ್ಷಿ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನಡೆಯಲಿದೆ.
ರಂಗಸಿರಿ ದಸರಾ ಯಕ್ಷಪಯಣ ನಾಳೆಯಿಂದ
0
ಸೆಪ್ಟೆಂಬರ್ 25, 2022