ಕೊಲ್ಲಂ: ಮಾತಾ ಅಮೃತಾನಂದಮಯಿ ಅವರ ತಾಯಿ ದಮಯಂತಿಯಮ್ಮ (97) ಸೋಮವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಅವರು ಅಮೃತಪುರಿಯಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು.
ದಮಯಂತಿಯಮ್ಮ ಅವರು ಇಡಯಮನೆಯಿಲ್ ನ ದಿ.ಸುಗುಣಾನಂದ ಅವರ ಪತ್ನಿ. ದಮಯಂತಿಯಮ್ಮ ಅವರ ಇತರ ಮಕ್ಕಳು ಕಸ್ತೂರಿ ಬಾಯಿ, ದಿ. ಸುಗುತನ್, ಸುಗುಣಮ್ಮ, ಸಜಿನಿ, ಸುರೇಶ್ ಕುಮಾರ್, ಸತೀಶ್ ಕುಮಾರ್ ಮತ್ತು ಸುಧೀರ್ ಕುಮಾರ್. ಸೋದರಳಿಯರು ರಿಷಿಕೇಶ್, ಶಾಜಿ, ರಾಜು, ಗೀತಾ, ರಾಜಶ್ರೀ ಮತ್ತು ಮನೀಶಾ. ಮಂಗಳವಾರ ಅಮೃತಪುರಿ ಆಶ್ರಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಮಾತಾ ಅಮೃತಾನಂದಮಯಿ ಅವರಿಗೆ ಮಾತೃ ವಿಯೋಗ
0
ಸೆಪ್ಟೆಂಬರ್ 19, 2022
Tags